ಬರೇಲಿಯಲ್ಲಿ ಹಸಿವಿನಿಂದ ಮಹಿಳೆ ಸಾವು
ಪ್ರತಿ ವರ್ಷ ಧಾನ್ಯ ಉತ್ಪಾದನೆಯಲ್ಲಿ ಭಾರತವು ದಾಖಲೆ ಮಾಡುತ್ತಿದೆ. ನಮ್ಮ ದೇಶದ ಧಾನ್ಯಗಳು ಅನೇಕ ದೇಶಗಳ ಹಸಿವು ಅಳಿಸುತ್ತಿವೆ. ಆದರೆ, ಇನ್ನೂ ಇಲ್ಲಿ ಜನರು ಹಸಿವಿನಿಂದ ಸಾವನ್ನಪ್ಪುತ್ತಿರುವುದು ಮಾತ್ರ ದುರ್ದೈವ.
ಬರೇಲಿ: ಭಾರತವು ಪ್ರತಿವರ್ಷ ಧಾನ್ಯ ಉತ್ಪಾದನೆಯಲ್ಲಿ ದಾಖಲೆ ಸೃಷ್ಟಿಸುತ್ತಿದೆ. ನಮ್ಮ ದೇಶದ ಧಾನ್ಯಗಳು ಬೇರೆ ದೇಶದ ಜನರ ಹಸಿವನ್ನು ನೀಗಿಸುತ್ತಿದೆ. ಅಲ್ಲದೆ ಸಾವಿರಾರು ಟನ್ ದವಸ-ಧಾನ್ಯಗಳು ಸರಿಯಾದ ನಿರ್ವಹನೆಯಿಲ್ಲದೆ ಕೊಳೆಯುತ್ತವೆ. ಆದರೆ ಉತ್ತರ ಪ್ರದೇಶದ ಬರೇಲಿಯಲ್ಲಿ ಸಕೀನ ಎಂಬ ಮಹಿಳೆಯೊಬ್ಬರು ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಕಂಡಿತವಾಗಿಯೂ ವಿಪರ್ಯಾಸವೇ ಸರಿ.
ಸಕೀನ ಹಲವು ದಿನಗಳವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಬಯೋಮೆಟ್ರಿಕ್ ಕಾರಣದಿಂದಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಈಕೆಯ ಪತಿಗೆ ನೀಡಬೇಕಾದ ರೇಷನ್ ಅನ್ನು ಒದಗಿಸಲು ನಿರಾಕರಿಸಿದರು. ಈ ಕಾರಣದಿಂದಾಗಿ ಹಸಿವಿನಿಂದ ಬಳಲುತ್ತಿದ್ದ ಮಹಿಳೆ ಬುಧವಾರ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮಾಹಿತಿ ಪ್ರಕಾರ, ಸಕೀನ ತನ್ನ ಗಂಡನೊಂದಿಗೆ ಬರೇಲಿಯಲ್ಲಿ ವಾಸಿಸುತ್ತಿದ್ದರು. ಕಳೆದ ಹಲವಾರು ದಿನಗಳ ಕಾಲ ಆಕೆ ಆರೋಗ್ಯ ಅಸ್ವಸ್ತತೆಯಿಂದ ಬಳಲುತ್ತಿದ್ದಳು. ಮನೆಯಲ್ಲಿ ರೇಷನ್ ಮುಗಿದಿದೆ. ಅನಾರೋಗ್ಯದ ಕಾರಣ, ಸಕೀನನು ರೇಷನ್ ಅಂಗಡಿಗೆ ಹೋಗಲು ಸಾಧ್ಯವಾಗಲಿಲ್ಲ. ಅವರಿಗೆ ಬಿಪಿಎಲ್ ಕಾರ್ಡ್ ಇದೆ. ಸಕೀನ ತನ್ನ ಕಾರ್ಡ್ ಅನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ತರಲು ತನ್ನ ಪತಿಯನ್ನು ಕಳುಹಿಸಿದಳು. ಆದರೆ, ಸಕೀನ ಪತಿಗೆ ಪಡಿತರ ವಿತರಣೆಯನ್ನು ನೀಡಲು ನ್ಯಾಯಬೆಲೆ ಅಂಗಡಿಯಾತ ನಿರಾಕರಿಸಿದರು. ಸಾಕಷ್ಟು ಸಮಜಾಯಿಷಿಯನ್ನು ನೀಡಿದರೂ ಸಹ ಪಡಿತರವನ್ನು ನೀಡಲು ವ್ಯಾಪಾರಿ ನಿರಾಕರಿಸಿ, ಸಕೀನಾಳ ಪತಿಯನ್ನು ಖಾಲಿಯಾಗಿ ಹಿಂತಿರುಗಿಸಿದನು. ಮನೆಯಲ್ಲಿ ಧಾನ್ಯ ಕೂಡ ಇರದ ಕಾರಣ ಸಕೀನಾ ಹಸಿವಿನಿಂದ ಹಸುನೀಗಿರುವುದಾಗಿ ಕುಟುಂಬ ತಿಳಿಸಿದೆ.
ಈ ಹಿಂದೆ ಜಾರ್ಖಂಡ್ ನಲ್ಲಿ ಇದೇ ರೀತಿಯಾಗಿ ಒಂದು ಮಗು ಬಲಿಯಾಗಿತ್ತು. ನಂತರ ಒಬ್ಬ ಆಟೋ ಚಾಲಕ ಕೂಡ ಹಸಿವಿನಿಂದ ಪ್ರಾಣ ಬಿಟ್ಟಿದ್ದ. ಭಾರತದಲ್ಲಿ ಈ ರೀತಿ ಜನರು ಹಸಿವಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.