ಬೆಡ್ ರೂಮಿನಲ್ಲಿ ಸಿಸಿಟಿವಿ, ಮಹಿಳಾ ಆಯೋಗಕ್ಕೆ ಪತಿ ವಿರುದ್ಧ ಪತ್ನಿ ದೂರು
ತ್ರಿಪುರಾದ ಮಹಿಳೆಯೊಬ್ಬಳು ಪತಿ ಬೆಡ್ ರೂಮಿನಲ್ಲಿಯೂ ಸಿಸಿಟಿವಿಯನ್ನು ಅಳವಡಿಸಿದ್ದಕ್ಕೆ ಮಹಿಳಾ ಆಯೋಗಕ್ಕೆ ಪತ್ನಿ ದೂರು ನೀಡಿದ್ದಾಳೆ. ಆದರೆ ಪತಿ ತನ್ನ ಕ್ರಮನ್ನು ಸಮರ್ಥಿಸಿಕೊಂಡು ಇದೆಲ್ಲವೂ ಸ್ವಯಂ ರಕ್ಷಣೆಗೆ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ನವದೆಹಲಿ: ತ್ರಿಪುರಾದ ಮಹಿಳೆಯೊಬ್ಬಳು ಪತಿ ಬೆಡ್ ರೂಮಿನಲ್ಲಿಯೂ ಸಿಸಿಟಿವಿಯನ್ನು ಅಳವಡಿಸಿದ್ದಕ್ಕೆ ಮಹಿಳಾ ಆಯೋಗಕ್ಕೆ ಪತ್ನಿ ದೂರು ನೀಡಿದ್ದಾಳೆ. ಆದರೆ ಪತಿ ತನ್ನ ಕ್ರಮನ್ನು ಸಮರ್ಥಿಸಿಕೊಂಡು ಇದೆಲ್ಲವೂ ಸ್ವಯಂ ರಕ್ಷಣೆಗೆ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ದಂಪತಿಗಳಿಬ್ಬರನ್ನು ರತ್ನಾ ಪೊದ್ದಾರ್ ಮತ್ತು ಚಂದನ್ ಕಾಂತಿದರ ಎಂದು ತಿಳಿದು ಬಂದಿದೆ, ಇಬ್ಬರು ಮೂಲತಃ ಪಶ್ಚಿಮ ತ್ರಿಪುರಾ ಜಿಲ್ಲೆಯವರಾಗಿದ್ದು, ಕಳೆದ ಮೂರು ವರ್ಷಗಳಿಂದ ಅವರು ಬೇರೆ ಬೇರೆ ವಾಸಿಸುತ್ತಿದ್ದಾರೆ. ಇನ್ನೊಂದೆಡೆ ಪತ್ನಿ ಹೇಳುವಂತೆ ಮದುವೆಯಾದ ನಂತರ ತಮಗೆ ವರದಕ್ಷಣೆ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.
'ಅವನ ಕುಟುಂಬ ಮದುವೆಯಾದ ನಂತರ ಯಾವುದೇ ವರದಕ್ಷಿಣೆ ಕೇಳಲಿಲ್ಲ, ಆದರೆ ಕಾಲ ಕಳೆದಂತೆ ಅವರು ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದರು. ನಮ್ಮ ಅತ್ತಿಗೆ ಮತ್ತು ಅಳಿಯ ಹಾಗೂ ನೆರೆಹೊರೆಯವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲ್ಲೆ ಮಾಡಿದರು ಎಂದು ಅವರು ಹೇಳಿದ್ದಾರೆ.ಇನ್ನು ಮುಂದುವರೆದು ಸಿಸಿಟಿವಿಯನ್ನು ಬೆಡ್ ರೂಮಿನಲ್ಲಿ ಹಾಕಿದ ನಂತರ ಅವರ ಸಂಬಂಧವು ಮತ್ತಷ್ಟು ಹದಗೆಟ್ಟಿತು ಎಂದು ಹೇಳಿದ್ದಾರೆ .
'ಎಲ್ಲ ಕಡೆ ಕ್ಯಾಮರಾವನ್ನು ಅಳವಡಿಸಲಾಗಿತ್ತು ಮುಖ್ಯದ್ವಾರ, ಕಾರಿಡಾರ್,ನಮ್ಮ ಅತ್ತಿಗೆ ಕೋಣೆ, ಹಾಗೂ ಬೆಡ್ ರೂಮಿನಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಇದರ ನಿರ್ವಹಣೆ ನಮ್ಮ ಅತ್ತಿಗೆ ಬಳಿ ಇತ್ತು, ಇದು ವ್ಯಕ್ತಿ ಖಾಸಗಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.ಆದರೆ ಈ ಎಲ್ಲ ಆರೋಪಗಳನ್ನು ಪತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.