ಮುಂಬೈ: ವೇಶ್ಯಾಗೃಹ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು  ಭಾನುವಾರ ಪೊಲೀಸರು ಬಂಧಿಸಿದ್ದು, ಆಕೆ ಪತಿ ಸೇರಿದಂತೆ ಮೂರು ಜನರನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆಕೆಯು ತನ್ನ ಗಂಡನನ್ನು 13 ವರ್ಷಗಳ ಹಿಂದೆ ಕೊಂದಿದ್ದಳು ಮತ್ತು ಆತನ ದೇಹವನ್ನು ತನ್ನ ಮನೆಯ ಸೆಪ್ಟಿಕ್ ಟ್ಯಾಂಕ್ ನಲ್ಲಿ ಹೂತಿಟ್ಟಿದ್ದಳು ಎಂದು ಹೇಳಲಾಗಿದೆ. ಆರೋಪಿ 42 ವರ್ಷ ವಯಸ್ಸಿನ ಸವಿತಾ ಭಾರತಿ ಎಂದು ಗುರುತಿಸಲಾಗಿದೆ.


2004 ರಲ್ಲಿ, ಆಕೆ ತನ್ನ ಪತಿ ಸಾಹ್ದೇವ್ ಅವರನ್ನು ತನ್ನ ಪ್ರೇಮಿ ಕಮಲೇಶ್ ಜೊತೆ ಪತಿಗೆ ಸಿಕ್ಕಿಬಿದ್ದ ನಂತರ  ಭಾರತಿ ತನ್ನ ಪ್ರೇಯಸಿ ಜೊತೆ ಸೇರಿ ಸಾಹ್ದೇವ್ನನ್ನು ಕೊಂದು, ಆತನ ದೇಹವನ್ನು ಸಿಮೆಂಟ್ನೊಂದಿಗೆ ಸೆಪ್ಟಿಕ್ ಟ್ಯಾಂಕ್ ನಲ್ಲಿ ಮುಚ್ಚಿದರು ಎಂದು ವರದಿಯಿಂದ ತಿಳಿದುಬಂದಿದೆ.


ಗುರುವಾರ, ಭಾರತಿಯನ್ನು ಪಾಲ್ಘರ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.