Aadhaar Card New Rule - ಆಧಾರ್ ಕಾರ್ಡ್ (Aadhaar Card) ಹೊಂದಿದವರಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನೀವು ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಹೊರಟಿದ್ದರೆ, ನಿಮ್ಮ ತಂದೆ ಅಥವಾ ಗಂಡನೊಂದಿಗಿನ ಸಂಬಂಧದ ಗುರುತನ್ನು ಕಾರ್ಡ್‌ನಲ್ಲಿ ಬಹಿರಂಗಪಡಿಸಲಾಗುವುದಿಲ್ಲ. ಅಂದರೆ, ಇನ್ನು ಮುಂದೆ ಆಧಾರ್ ಕಾರ್ಡ್ ನಲ್ಲಿ ಗಂಡ ಅಥವಾ ತಂದೆಯ ಹೆಸರು ಕಡ್ಡಾಯವಲ್ಲ. ಅಂದರೆ ಇನ್ಮುಂದೆ ಆಧಾರ್ ಕಾರ್ಡ್ ಕೇವಲ ನಿಮ್ಮ ವಿಶಿಷ್ಟ ಗುರುತಿನ ಸಾಧನವಾಗಿ ಮಾತ್ರ ಉಳಿಯಲಿದೆ. 


COMMERCIAL BREAK
SCROLL TO CONTINUE READING

ಆಧಾರ್ ಕಾರ್ಡ್ ಮೇಲಿನ ಸಂಬಂಧ ಸೂಚಕ ಬದಲಾಗಲಿದೆ
ದೆಹಲಿಯ ಪೊಲೀಸ್ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಆಗಿರುವ ರಣಧೀರ್ ಸಿಂಗ್ ತನ್ನ ಪತ್ನಿಯ ಆಧಾರ್ ಕಾರ್ಡ್‌ನಲ್ಲಿ ತನ್ನ ಮನೆಯ ವಿಳಾಸವನ್ನು ಬದಲಾಯಿಸಿದ ನಂತರ 'ವೈಫ್ ಆಫ್' ಬದಲಿಗೆ 'ಕೇರ್ ಆಫ್' ನಲ್ಲಿ ಕಾಣಿಸಿಕೊಂಡಾಗ ಅವರಿಗೆ ಆಶ್ಚರ್ಯ ಕಾದಿತ್ತು. ಮೊದಲಿಗೆ ಅವರು ಕಂಪ್ಯೂಟರ್ ವ್ಯವಸ್ಥೆಯಲ್ಲಿ ಸಮಸ್ಯೆ ಇರಬಹುದೆಂದು ಭಾವಿಸಿದ್ದರು, ಆದರೆ ನಂತರ ಅವರು ಆಧಾರ್ ಕಾರ್ಡ್‌ನಲ್ಲಿ ಬದಲಾವಣೆಗಾಗಿ ಅಂಚೆ, ಬ್ಯಾಂಕ್ ಮತ್ತು ಇತರ ಹಲವು ಅಧಿಕೃತ ಕೇಂದ್ರಗಳಿಗೆ ಹೋದಾಗ ಅವರ ಹೆಸರು ಎಲ್ಲಾ ಕೇಂದ್ರಗಳ  C/O ಮಾತ್ರ ಬರುತ್ತಿತ್ತು. ವಾಸ್ತವದಲ್ಲಿ ಸಿಂಗ್ ಈ ಹಿಂದೆ ಅಶೋಕ್ ವಿಹಾರ್ ಪೊಲೀಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಆದರೆ, ನಿವೃತ್ತಿಯಾದ ನಂತರ ಅವರು ಪ್ರೀತಂಪುರನಲ್ಲಿ ವಾಸಿಸಲು ಆರಂಭಿಸಿದರು. ಅದಕ್ಕಾಗಿಯೇ ಅವರು ಆಧಾರ್ ಕಾರ್ಡ್‌ನಲ್ಲಿರುವ ಎಲ್ಲಾ ಕುಟುಂಬದ ಸದಸ್ಯರ ವಿಳಾಸವನ್ನು ಬದಲಾಯಿಸಲು ಹೋದರು. ಮಗನ ಆಧಾರ್ ಕಾರ್ಡ್ ನಲ್ಲಿ ತಂದೆಯ ಹೆಸರು ಸೂಚಕ ಸನ್ ಆಫ್ ಜಾಗದಲ್ಲಿ ಕೇರ್ ಆಫ್ ಕಾಣಿಸಲು ಆರಂಭಿಸಿತ್ತು.


ಸುಪ್ರೀಂ ಕೋರ್ಟ್ ನೀಡಿದೆ ಈ ತೀರ್ಪು (Aadhaar Card Big Update)
ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಓರ್ವ ಹಿರಿಯ ಅಧಿಕಾರಿ, 2018ರಲ್ಲಿ ಆಧಾರ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ವಿಸ್ತೃತ ತೀರ್ಪು ಬಂದಿದ್ದು, ಈ ತೀರ್ಪಿನಲ್ಲಿ ಜನರ ಖಾಸಗಿತನದ ಕುರಿತು ಹೇಳಲಾಗಿದೆ ಹಾಗೂ ಆಧಾರ್ ಮೇಲೆ ಇನ್ಮುಂದೆ ಸಂಬಂಧಗಳ ಮಾಹಿತಿ ನೀಡಲಾಗುವುದಿಲ್ಲ ಎಂದಿದ್ದಾರೆ. ಆದರೆ ಈ ಬದಲಾವಣೆ ಯಾವ ವರ್ಷದ ಯಾವ ತಿಂಗಳಿನಿಂದ ಜಾರಿಗೆ ಬಂದಿದೆ ಎಂಬ ಮಾಹಿತಿ UIDAI ವತಿಯಿಂದ ನೀಡಲಾಗಿಲ್ಲ.


ಆಧಾರ್ ನಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಜಾರಿಗೆ ತರಲು ಅಧಿಕೃತವಾಗಿರುವ ಮತ್ತು ಐಟಿ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕಾಮನ್ ಸರ್ವಿಸ್ ಸೆಂಟರ್ (CSC) ಮುಖ್ಯ ನಿರ್ದೇಶಕ ದಿನೇಶ್ ತ್ಯಾಗಿ ಹೇಳುವ ಪ್ರಕಾರ, ನಿಮುಂದೆ ಆಧಾರ್ ಕಾರ್ಡ್ ನಲ್ಲಿ ತಂದೆ, ಪುತ್ರ, ಪುತ್ರಿಯರ ಸೂಚಕಗಳ ಬದಲು 'ಕೇರ್ ಆಫ್' ಮುದ್ರಿಸಲಾಗುವುದು. ಅಷ್ಟೇ ಅಲ್ಲ ಯಾರೊಬ್ಬರು ಬಯಸಿದರೆ 'ಕೇರ್ ಆಫ್' ಮಾಹಿತಿ ಕೂಡ ನೀಡುವುದು ಕಡ್ಡಾಯವಲ್ಲ ಎಂದು ನಿಯಮ ಹೇಳುತ್ತದೆ ಎಂದಿದ್ದಾರೆ. ಕೇವಲ ಹೆಸರು ಮತ್ತು ವಿಳಾಸದ ಆಧಾರವನ್ನು ಪಡೆದು ಆದಾರ್ ಕಾರ್ಡ್ ಮಾಡಿಸಬಹುದು ಮತ್ತು ಆಧಾರ್ ಆಧರಿಸಿ ಸಂಬಂಧಗಳನ್ನು ಸ್ಥಾಪಿಸಲಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-Whatsapp ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ, ಇಲ್ಲಿದೆ ಫುಲ್ ಲಿಸ್ಟ್


ಆಧಾರ್ ವ್ಯಕ್ತಿಯ ವಿಶಿಷ್ಟ ಗುರುತು ಚೀಟಿ (Changes In Aadhaar Card)
12 ಅಂಕಿಗಳ ವಿಶಿಷ್ಟ ಸಂಖ್ಯೆಯನ್ನು ಆಧಾರ್ ಕಾರ್ಡ್‌ನಲ್ಲಿ ನೀಡಲಾಗಿದೆ ಮತ್ತು ಅದರ ಬೆರಳಚ್ಚು ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಒಂದು ವಿಶಿಷ್ಟತೆಯಿದೆ. ಆಧಾರ್ ಕಾರ್ಡ್ ಮಾಡಿದ ನಂತರ ಯಾರಾದರೂ ತಮ್ಮ ಹೆಸರನ್ನು ಬದಲಾಯಿಸಿದರೂ, ಅವರನ್ನು ಕೇವಲ ವಿಶಿಷ್ಟ ಸಂಖ್ಯೆಯೊಂದಿಗೆ ಮಾತ್ರ ಗುರುತಿಸಲಾಗುವುದು. ಇದು ಸಂಪೂರ್ಣವಾಗಿ ವೈಯಕ್ತಿಕ ಗುರುತಿನ ಚೀಟಿಯಾಗಿ ಉಳಿಯಲಿದೆ.


ಇದನ್ನೂ ಓದಿ-ಮೂರನೇ ಅಲೆ ಭೀತಿ ಹಿನ್ನಲೆಯಲ್ಲಿ ಸೆಪ್ಟೆಂಬರ್ 20 ರವರೆಗೆ ಲಾಕ್ ಡೌನ್ ವಿಸ್ತರಿಸಿದ ಹರ್ಯಾಣ


ಇದರಿಂದ ಅನಾಥರಿಗಾಗುವ ತೊಂದರೆ ತಪ್ಪಲಿದೆ
ಈ ಕುರಿತು ಮಾತನಾಡಿರುವ ರಿಟೈರ್ಡ್ ಸಬ್ ಇನ್ಸ್ಪೆಕ್ಟರ್ ಸಿಂಗ್, ವಿಶೇಷ ಸಂಗರ್ಭಗಳಲ್ಲಿ ತಮ್ಮ ಪತ್ನಿ ತಾವು ಯಾರೊಬ್ಬರ ಪತ್ನಿಯಾಗಿರುವುದಾಗಿ ಹೇಗೆ ಹೇಳಿಕೊಳ್ಳಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಪ್ರಾಧಿಕಾರದ ಈ ನಿಯಮದಿಂದ ಇನ್ಮುಂದೆ ಅನಾಥರಿಗೂ ಕೂಡ ಆಧಾರ್ ಕಾರ್ಡ್ ಮಾಡಿಸುವಲ್ಲಿನ ಅಡಚಣೆ ದೂರಾಗಲಿದೆ ಎಂದು ತಜ್ಞರು ಹೇಳಿದ್ದಾರೆ.


ಇದನ್ನೂ ಓದಿ-"Tokyo Paralympics ನಲ್ಲಿನ ಭಾರತೀಯರ ಸಾಧನೆ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.