ನವದೆಹಲಿ: ನಮ್ಮ ದೇಶದಲ್ಲಿ, ಯಾವುದೇ ಓರ್ವ ವ್ಯಕ್ತಿಯ ಗುರುತು ಮತ್ತು ವಿಳಾಸದ ಪುರಾವೆ ರೂಪದಲ್ಲಿ ಆಧಾರ್ ಕಾರ್ಡ್ ಅನ್ನು ಅತ್ಯಂತ ವಿಶ್ವಾಸಾರ್ಹ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಕಾಲಾನಂತರದಲ್ಲಿ ಜನರು ಆಧಾರ್ ಕಾರ್ಡ್ ಮಾಹಿತಿಯಲ್ಲಿ ಬದಲಾವಣೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ತಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಅವರು ಸಾಕಷ್ಟು ಪರದಾಡಬೇಕಾಗುತ್ತದೆ. ಇದನ್ನು ಮನಗಂಡ UIDAI,ಟ್ವೀಟ್ ಮಾಡುವ ಮೂಲಕ ಮಾಹಿತಿಯೊಂದನ್ನು ನೀಡಿದ್ದು, ಇದೀಗ ನೀವು ಕೇವಲ ರೂ.100 ಪಾವತಿಸಿ ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ  ಜನಸಾಂಖಿಕ ಅಥವಾ ಬಯೋಮೆಟ್ರಿಕ್ ಡಿಟೇಲ್ ನಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಾಧಿಕಾರ ಹಂಚಿಕೊಂಡಿದೆ. ಈ ಕುರಿತು ಬಿಡುಗಡೆಗೊಳಿಸಿರುವ ತನ್ನ ಹೇಳಿಕೆಯಲ್ಲಿ ಪ್ರಾಧಿಕಾರ, ಯಾವುದೇ ಓರ್ವ ವ್ಯಕ್ತಿಯ ಆದಾರ್ ಕಾರ್ಡ್ ನಲ್ಲಿ ಮಹತ್ವದ ಬದಲಾವಣೆ ಮಾಡಲು ಆಧಾರ್ ನೋಂದಣಿ ಕೇಂದ್ರ ಅಥವಾ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮಾಹಿತಿ ಅಪ್ಡೇಟ್ ಮಾಡಬಹುದು ಎಂದು ಹೇಳಿದೆ.


ಸಾಮಾಜಿಕ ಮಾಧ್ಯಮಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ UIDAI ಮಾಡಿರುವ ಟ್ವೀಟ್ ನಲ್ಲಿ, ಆಧಾರ್ ಕಾರ್ಡ್ ಧಾರಕರು ತಮ್ಮಆಧಾರ್ ಕಾರ್ಡ್ ನಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬದಲಾವಣೆಗಳನ್ನು ಮಾಡಬಹುದಾಗಿದೆ ಎಂದಿದೆ.  ಇದರಲ್ಲಿ ಬಯೋಮೆಟ್ರಿಕ್ ಮಾಹಿತಿ ಅಪ್ಡೇಟ್ ಗಾಗಿ ರೂ.100  ಹಾಗೂ ಡೆಮೋಗ್ರಾಫಿಕ್ ಮಾಹಿತಿ ಅಪ್ಡೇಟ್ ಗಾಗಿ ರೂ.50 ಪಾವತಿಸಬೇಕು ಎಂದು ಹೇಳಿದೆ.


ಆಧಾರ್ ಕಾರ್ಡ್ ಹೊಂದಿರುವವರು ಹೆಸರು ಅಥವಾ ವಿಳಾಸ ಅಥವಾ ಹುಟ್ಟಿದ ದಿನಾಂಕದಂತಹ ಡೆಮೋಗ್ರಾಫಿಕ್ ಮಾಹಿತಿಯನ್ನು ಬದಲಾಯಿಸಲು ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಇದಕ್ಕಾಗಿ ಯುಐಡಿಎಐ ಒಟ್ಟು 32 ದಾಖಲೆಗಳ ಪಟ್ಟಿಯನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ಇರುವ ದಾಖಲೆಗಳ ಆಧಾರದ ಮೇಲೆ ಕಾರ್ಡ್ ಧಾರಕರ ಗುರುತು ಸಿದ್ಧಪಡಿಸಲಾಗುವುದು. ಅಷ್ಟೇ ಅಲ್ಲ ಆಧಾರ್ ಕಾರ್ಡ್ ನಲ್ಲಿ ಕೆಲ ಬದಲಾವಣೆಗಳನ್ನು ಕಾರ್ಡ್ ಧಾರಕರು ಯಾವುದೇ ರೀತಿಯ ದಾಖಲೆಗಳನ್ನು ನೀಡದೆಯೂ ಕೂಡ ಮಾಡಬಹುದು. ಉದಾಹರಣೆಗೆ ಆಧಾರ್ ಕಾರ್ಡ್ ನಲ್ಲಿನ ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರವನ್ನು ನೀವು ಯಾವುದೇ ರೀತಿಯ ಪುರಾವೆ ನೀಡದೆ ಬದಲಾವಣೆ ಮಾಡಬಹುದು.