ಆಧಾರ್ ಕಾರ್ಡ್ ಇಲ್ಲ ಅಂದ ಮಾತ್ರಕ್ಕೆ ಕರೋನಾ ಲಸಿಕೆ ನಿರಾಕರಿಸಬಹುದೇ.?
ಆಧಾರ್ ಕಡ್ಡಾಯ ಎಂಬ ಪ್ರಶ್ನೆಗೆ ಯುಐಡಿಎಐ ಸ್ಪಷ್ಟನೆ ನೀಡಿದೆ. ಆಧಾರ್ ಇಲ್ಲ ಎಂದ ಮಾತ್ರಕ್ಕೆ ಯಾವುದೇ ವ್ಯಕ್ತಿಗೆ ಲಸಿಕೆ ನೀಡುವುದು, ಔಷಧಿ ನೀಡುವುದು, ಆಸ್ಪತ್ರೆಗೆ ಸೇರಿಸಿಕೊಳ್ಳುವುದನ್ನು ನಿರಾಕರಿಸುವಂತಿಲ್ಲ.
ನವದೆಹಲಿ : ಕರೋನಾ ಲಸಿಕೆ (Coronavirus) ನೀಡಬೇಕಾದರೆ ಇದೀಗ ಆಧಾರ್ ಕಾರ್ಡ್ ಕೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ನಡುವೆ, ಪ್ರಶ್ನೆಯೊಂದು ಉದ್ಭವವಾಗಿದೆ. ಒಂದು ವೇಳೆ ನಿಮ್ಮಲ್ಲಿ ಆಧಾರ್ ಕಾರ್ಡ್ (Aadhaar card) ಇಲ್ಲದೇ ಹೋದ ಪಕ್ಷದಲ್ಲಿ ಕರೋನಾ ಲಸಿಕೆ ನಿರಾಕರಿಸಬಹುದೇ..? ಈ ಪ್ರಶ್ನೆ ಹಲವರ ಮನಸ್ಸಿಗೂ ಬಂದಿರಬಹುದು. ಹಲವರಿಗೆ ಅನುಭವಕ್ಕೆ ಬಂದಿರಬಹುದು.
ಇದಕ್ಕೆ ಯುಐಡಿಎಐ ( UIDAI) ಹೇಳಿದ್ದೇನು..?
ಆಧಾರ್ (Aadhaar) ಕಡ್ಡಾಯ ಎಂಬ ಪ್ರಶ್ನೆಗೆ ಯುಐಡಿಎಐ ಸ್ಪಷ್ಟನೆ ನೀಡಿದೆ. ಆಧಾರ್ ಇಲ್ಲ ಎಂದ ಮಾತ್ರಕ್ಕೆ ಯಾವುದೇ ವ್ಯಕ್ತಿಗೆ ಲಸಿಕೆ ನೀಡುವುದು, ಔಷಧಿ ನೀಡುವುದು, ಆಸ್ಪತ್ರೆಗೆ (Hospital) ಸೇರಿಸಿಕೊಳ್ಳುವುದನ್ನು ನಿರಾಕರಿಸುವಂತಿಲ್ಲ. ಆಧಾರ್ ಕಾರ್ಡ್ ಇಲ್ಲ ಎಂದ ಮಾತ್ರಕ್ಕೆ ಯಾವುದೇ ಅವಶ್ಯಕ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ಯುಐಡಿಎಐ (UIDAI) ಹೇಳಿದೆ.
ಇದನ್ನೂ ಓದಿ : ಕರೋನಾ ವೈರಸ್ B1617 ರೂಪಾಂತರಿ ವಿರುದ್ಧವೂ ಪರಿಣಾಮಕಾರಿಯಾಗಿದೆ Covaxin ; ಅಧ್ಯಯನದಲ್ಲಿ ಬಹಿರಂಗ
ಯುಐಡಿಎಐ ಯಾಕೆ ಹೀಗೆ ಹೇಳಿದ್ದು..?
ಕರೋನಾ (COVID-19) ಮಹಾಮಾರಿಯ ಎರಡನೇ ಅಲೆ ಹರಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಇಲ್ಲ ಎಂಬ ನೆಪ ಹೇಳಿ ಹಲವು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ್ದ ವರದಿಗಳು ಪ್ರಕಟವಾಗಿತ್ತು.ಈ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ವೇಳೆ ಸಮಸ್ಯೆಗಳೂ ಉಂಟಾಗಿತ್ತು. ಈ ಹಿನ್ನೆಲೆಯಲ್ಲೇ ಯುಐಡಿಎಐ ಈ ಹೇಳಿಕೆ ನೀಡಿದೆ. ಭಾರತೀಯ ಪ್ರಜೆಗೆ ಕೆಲವೊಂದು ಸೇವೆಗಳನ್ನು ಸುನಿಶ್ಚಿತಗೊಳಿಸುವ ನಿಟ್ಟಿನಲ್ಲಿ ಆಧಾರ್ ನಂಬರ್ ಕೇಳಲಾಗುತ್ತದೆ. ವೈದ್ಯಕೀಯ ಸೇವೆ ಪಡೆಯಲು ಆಧಾರ್ ನಂಬರ್ ಅನಿವಾರ್ಯ ಅಲ್ಲ. ಆಧಾರ್ ನಂಬರ್ ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ವ್ಯದ್ಯಕೀಯ ಸೇವೆ ನಿರಾಕರಿಸುವಂತಿಲ್ಲ. ಆಧಾರ್ ನಂಬರ್ ಇಲ್ಲದೇ ಹೋದರೂ ಬೇರೆ ಐಡಿ ಪ್ರೂಫ್ (ID Proof) ತೋರಿಸಿ ಕರೋನಾ ಲಸಿಕೆ (Corona vaccine) ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಜನತೆಗೆ ಯಾವುದೇ ಸಂದೇಹ ಬೇಡ.
ಇದನ್ನೂ ಓದಿ : ದೇಶದಲ್ಲಿ ಕೊರೊನಾ ಪರಿಸ್ಥಿತಿ ಸ್ಥಿರವಾಗುತ್ತಿದೆ- ಕೇಂದ್ರ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.