ನವದೆಹಲಿ: Aadhaar Update - ಆಧಾರ್ ಕಾರ್ಡ್ ಬಗ್ಗೆ ಪ್ರಮುಖ ಸುದ್ದಿ. ಇದೀಗ ಯುಐಡಿಎಐ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಯುಐಡಿಎಐ ಸಿಇಒ ಸೌರಭ್ ಗರ್ಗ್, ಯುಐಡಿಎಐ  ಯೋಜನೆಯನ್ನು ರೂಪಿಸುತ್ತಿದ್ದು, ಆಸ್ಪತ್ರೆಯಲ್ಲಿ ಮಗು ಜನಿಸಿದ ತಕ್ಷಣ ಅದಕ್ಕೆ ಆಧಾರ್ ಕಾರ್ಡ್ ಒದಗಿಸಲಾಗುವುದು ಎಂದಿದ್ದಾರೆ. ಅಂದರೆ, ಇದೀಗ ಮಗುವಿನ ಪೋಷಕರು ತಮ್ಮ ಮಗುವಿನ ಆಧಾರ್ ಕಾರ್ಡ್ ಬಗ್ಗೆ ಚಿಂತಿಸಬೇಕಾಗಿಲ್ಲ.


COMMERCIAL BREAK
SCROLL TO CONTINUE READING

ಸೌರಭ್ ಗರ್ಗ್ ಹೇಳುವ ಪ್ರಕಾರ, 'ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಇದಕ್ಕಾಗಿ ಹೊಸ ಯೋಜನೆ ಸಿದ್ಧಪಡಿಸುತ್ತಿದೆ. ಈಗ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಆಧಾರ್ ಕಾರ್ಡ್ ನೀಡಲು ನೋಂದಣಿ ಮಾಡುವ ಸೌಲಭ್ಯವನ್ನು ಆಸ್ಪತ್ರೆಗಳಲ್ಲಿಯೇ ಒದಗಿಸಲಾಗುತ್ತಿದೆ. ಈ ಯೋಜನೆಯನ್ನು ಪ್ರಾರಂಭಿಸಲು UIDAI ಬರ್ತ್ ರಿಜಿಸ್ಟ್ರಾರ್‌ ಗಳ ಜೊತೆ ಸೇರಿ ನಿಕಟವಾಗಿ ಕೆಲಸ ಮಾಡಲಿದ್ದು, ಇದಕ್ಕಾಗಿ ಮಾತುಕತೆ ನಡೆಯುತ್ತಿದೆ' ಎನ್ನಲಾಗಿದೆ.


ಇನ್ನೂ ಹಲವು ಮಾಹಿತಿ ನೀಡಿದ ಯುಐಡಿಎಐ ಸಿಇಒ (Aadhaar Card Download)
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಸಿಇಒ ಸೌರಭ್ ಗರ್ಗ್ ಅವರು ಆಧಾರ್‌ಗೆ ಸಂಬಂಧಿಸಿದ ಇನ್ನೂ ಹಲವು ಪ್ರಮುಖ ಮಾಹಿತಿಯನ್ನು ನೀಡಿರುವುದು ಉಲ್ಲೇಖನೀಯ. ಇದರೊಂದಿಗೆ ಯುಐಡಿಎಐ ಭವಿಷ್ಯದ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.


ಆಸ್ಪತ್ರೆ ಆಧಾರ್ ನೀಡಲಿದೆ
'ಭಾರತದಲ್ಲಿ ಪ್ರತಿದಿನ ಸುಮಾರು 25 ಮಿಲಿಯನ್ ಮಕ್ಕಳು ಜನಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳ ಛಾಯಾಚಿತ್ರ ತೆಗೆದ ನಂತರ ಏಕಕಾಲಕ್ಕೆ ಆಧಾರ್ ಕಾರ್ಡ್ ನೀಡಲಾಗುವುದು ಎಂದು ಯುಐಡಿಎಐ ಯೋಜಿಸಿದೆ. ಹಾಗೆ ನೋಡಿದರೆ, ಪ್ರಸ್ತುತ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆಧಾರ್‌ಗೆ ಬಯೋಮೆಟ್ರಿಕ್ಸ್ ಅಗತ್ಯವಿಲ್ಲ, ಆದರೆ ಅವರ ವಯಸ್ಸು 5 ವರ್ಷಕ್ಕಿಂತ ಹೆಚ್ಚಿರುವಾಗ, ಅವರ ಬಯೋಮೆಟ್ರಿಕ್‌ಗಳನ್ನು ಮಾಡುವುದು ಕಡ್ಡಾಯವಾಗಿದೆ' ಎಂದು ಗರ್ಗ್ ಹೇಳಿದ್ದಾರೆ.


ಇದನ್ನೂ ಓದಿ-Gmail ಬಳಸುತ್ತೀರಾ? ಹಾಗಿದ್ರೆ ತಕ್ಷಣ ಅಪ್ಡೇಟ್ ಮಾಡಿ!


ಪ್ರಾದೇಶಿಕ ಭಾಷೆಯಲ್ಲೂ ಆಧಾರ್ ಮಾಡಲಾಗುವುದು
ಶೀಘ್ರದಲ್ಲೇ ಭಾರತದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೂ ಆಧಾರ್ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಸೌರಭ್ ಹೇಳಿದ್ದಾರೆ. ಪ್ರಸ್ತುತ, ದೇಶದಲ್ಲಿ ಆಧಾರ್ ಕಾರ್ಡ್‌ನ ಮಾಹಿತಿಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನೀಡಲಾಗುತ್ತಿದೆ. ಆದರೆ ಶೀಘ್ರದಲ್ಲೇ ಕಾರ್ಡ್ ಹೊಂದಿರುವವರ ಹೆಸರು ಮತ್ತು ಇತರ ವಿವರಗಳು ಆಧಾರ್ ಕಾರ್ಡ್‌ನಲ್ಲಿ ಪಂಜಾಬಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಒರಿಯಾ, ಮರಾಠಿ ಮುಂತಾದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಕಾಣಬಹುದಾಗಿದೆ.


ಇದನ್ನೂ ಓದಿ-Viral Video: ಹೆಂಡತಿಗೆ ಬಸ್ ಹತ್ತಿಸಲು ಗಂಡ ಏನು ಮಾಡಿದ್ದಾನೆ ನೋಡಿ..!


ಆಧಾರ್ ಅನಿವಾರ್ಯ
ಆಧಾರ್ ಕಾರ್ಡ್ ಇಂದು ಭಾರತದಲ್ಲಿ ಅತ್ಯಗತ್ಯ ದಾಖಲೆಯಾಗಿದೆ. ಇದು ಇಲ್ಲದೆ, ಆಧಾರ್ ಕಾರ್ಡ್ ಗುರುತಿನ ಪುರಾವೆ ಮಾತ್ರವಲ್ಲದೆ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಪ್ರಯೋಜನಗಳಿಗೆ ಕಡ್ಡಾಯ ದಾಖಲೆಯಾಗಿದೆ. ನಮ್ಮ ಆಧಾರ್ ಕಾರ್ಡ್ ಒಂದು ಅನನ್ಯ ದಾಖಲೆಯಾಗಿದೆ, ಏಕೆಂದರೆ ಇದು ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ಈಗ ಮಕ್ಕಳ ಅಡ್ಮಿಶನ್ ಗೂ ಕೂಡ ಆಧಾರ್ ಅತ್ಯಂತ ಮಹತ್ವದ ದಾಖಲೆಯಾಗಿ ಮಾರ್ಪಟ್ಟಿದೆ.


ಇದನ್ನೂ ಓದಿ-Astrology: ಇಂದು ರಾತ್ರಿ ಈ ಕೆಲಸ ಮಾಡುವುದರಿಂದ ದುರದೃಷ್ಟವೂ ಅದೃಷ್ಟವಾಗಿ ಬದಲಾಗುತ್ತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.