ದೇಶದ ಸರ್ಕಾರಿ ಹಾಗೂ ಹಲವು ಸರ್ಕಾರೇತರ ಸೇವೆಗಳನ್ನ ಪಡೆಯಬೇಕು ಅಂದರೆ ನೀವು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡ್​ನ್ನು ಕಡ್ಡಾಯ ಬಳಕೆ ಮಾಡಬೇಕಾಗುತ್ತದೆ. ಹೀಗಾಗಿ ಆಧಾರ್​ ಕಾರ್ಡ್​ನಲ್ಲಿ ನಮೂದಿಸಲಾಗಿರುವ ನಿಮ್ಮ ವಿವರ ಸಂಪೂರ್ಣವಾಗಿ ಸರಿಯಾಗಿದೆಯೇ ಅನ್ನೋದನ್ನ ಖಚಿತಪಡಿಸಿಕೊಳ್ಳಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಆಧಾರ್​ ಕಾರ್ಡ್​ ಮಾಹಿತಿಯನ್ನ ಆನ್​ಲೈನ್​​ನಲ್ಲಿ ನೀವು ಬದಲಾವಣೆ ಮಾಡುವ ಸಂದರ್ಭದಲ್ಲಿ ನಿಮಗೆ ಯುಆರ್​ಎನ್​ ಸಂಖ್ಯೆ(URN Number) ಸಿಗಲಿದೆ. ಈ 14 ಸಂಖ್ಯೆಯನ್ನ ನಮೂದಿಸುವ ಮೂಲಕ ನೀವು ಆಧಾರ್​ ಕಾರ್ಡ್​ನಲ್ಲಿ ಬದಲಾವಣೆಗಳನ್ನ ಮಾಡಬಹುದಾಗಿದೆ.


Corona, ಬರ್ಡ್ ಫ್ಲೂ ಬಳಿಕ ಆತಂಕ ಹೆಚ್ಚಿಸಿದ Parvo Virus


ಯುಆರ್​ಎನ್​ ಸ್ಟೇಟಸ್​ನ್ನು ನೀವು ಆನ್​ಲೈನ್​ ಹಾಗೂ ಆಫ್​​ಲೈನ್​ನಲ್ಲಿ ಪರಿಶೀಲನೆ ಮಾಡಬಹುದಾಗಿದೆ. ಈ ಯುಆರ್​ಎನ್​ ಸಂಖ್ಯೆಯನ್ನ ನೀವು ಗೌಪ್ಯವಾಗಿ ಇಡಬೇಕು. ಈ ಯುಆರ್​ಎನ್​ ಸಹಾಯದಿಂದ ನಿಮ್ಮ ಆಧಾರ್​ ಕಾರ್ಡ್(Aadhar Card)​ನಲ್ಲಿ ಬದಲಾವಣೆ ಮಾಡಬಹುದಾದ್ದರಿಂದ ಇದನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.


Health Insurance: 'ಆರೋಗ್ಯ ವಿಮೆ'ಯಲ್ಲಿ ಹೊಸ ಸೌಲಭ್ಯ ಅದು ಏಪ್ರಿಲ್ 1 ರಿಂದ ಲಭ್ಯ..!


https://ssup.uidai.gov.in/ssup/ ಗೆ ಲಾಗಿನ್​ ಆಗಿ


ಇದರಲ್ಲಿ ಚೆಕ್​ ಸ್ಟೇಟಸ್​ ಟ್ಯಾಬ್​ ಆಯ್ಕೆ ಮಾಡಿ.


ಇಲ್ಲಿ ನಿಮ್ಮ ಆಧಾರ್​ ಸಂಖ್ಯೆ ಹಾಗೂ ಯುಆರ್​ಎನ್ ಸಂಖ್ಯೆಯನ್ನು ನಮೂದಿಸಿ.


ಇದಾದ ಬಳಿಕ ಸೆಕ್ಯೂರಿಟಿ ಕೋಡ್​(security code) ಹಾಗೂ ವೆರಿಫಿಕೇಶನ್​ ವಿವರಗಳನ್ನ ಒದಗಿಸಿ.


ಅಂತ್ಯದಲ್ಲಿ ಗೆಟ್​ ಸ್ಟೇಟಸ್​ನಲ್ಲಿ ನಿಮ್ಮ ಯುಆರ್​ಎನ್​ ಮಾಹಿತಿ ತಿಳಿದುಕೊಳ್ಳಿ.


New guidelines: ಅಂತಹದ್ದೇನಾಗಿದೆ.? ವಿದೇಶಿ ವಿಮಾನಗಳ ಹಾರಾಟಕ್ಕೆ ಭಾರತ ಬ್ರೇಕ್ ಹಾಕಿದ್ದು ಯಾಕೆ?


ನಿಮ್ಮ ಆಧಾರ್​ ಕಾರ್ಡ್​ ವಿವರಗಳನ್ನ ಆನ್​​ಲೈನ್​​​ ನಲ್ಲಿ ತಿದ್ದುಪಡಿ ಮಾಡುವ ವೇಳೆಗೆ ನಿಮಗೆ ಒಂದು ಸ್ಲಿಪ್(Slip)​ ಸಿಗುತ್ತೆ. ಇದರಲ್ಲಿ ನಿಮ್ಮ ಯುಆರ್​ಎನ್​ ಹಾಗೂ ಎಸ್‌ಆರ್​ಎನ್​ ಸಂಖ್ಯೆಗಳು ನಮೂದಾಗಿ ಇರುತ್ತೆ. ಯುಆರ್​ಎನ್​ ಅನ್ನೋದು 14 ಸಂಖ್ಯೆಯನ್ನ ಹೊಂದಿದ್ದರೆ ಎಸ್​ಆರ್​ಎನ್​ 28 ಸಂಖ್ಯೆಯನ್ನ ಹೊಂದಿರುತ್ತೆ.


NHM MP Recruitment 2021: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ


ಒಮ್ಮೆ ನೀವು ಆಧಾರ್​ ಕಾರ್ಡ್​ ರಿಕ್ವೆಸ್ಟ್​ ಅಪ್​ಡೇಟ್​ ಮಾಡಲು ಆರಂಭಿಸಿದ್ರೆ ಅದನ್ನ ಮತ್ತೆ ಕ್ಯಾನ್ಸಲ್(Cancel)​ ಮಾಡಲು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಹಳೆಯ ಮಾಹಿತಿಯನ್ನೇ ಆಧಾರ್​ನಲ್ಲಿ ಇಡಬೇಕು ಎಂದು ಬಯಸಿದ್ರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದಾಗಿದೆ.


Assembly Election 2021: ಪಂಚರಾಜ್ಯಗಳ ಚುನಾವಣೆಯಲ್ಲಿ ಇವರಿಗೆ ಸಿಗಲ್ಲ Postal Voting ಸೌಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.