ಉಡಾನ್ ಯೋಜನೆ ವಿಸ್ತರಣೆ; ಈ ಪ್ರದೇಶಗಳಿಗೆ ಇರಲಿದೆ ವಿಮಾನಯಾನ ಭಾಗ್ಯ...!
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮಂಗಳವಾರ (ಡಿಸೆಂಬರ್ 3) ಉಡಾನ್ ಯೋಜನೆಯಡಿ ವಿಮಾನಯಾನ ನಿರ್ವಾಹಕರನ್ನು ಆಯ್ಕೆ ಮಾಡಲು ತನ್ನ ಪ್ರಾದೇಶಿಕ ಸಂಪರ್ಕ ಯೋಜನೆಯ 4 ನೇ ಸುತ್ತಿನ ಬಿಡ್ಡಿಂಗ್ ಗೆ ಆಹ್ವಾನಿಸಿದೆ. ಆಸಕ್ತ ಸಂಸ್ಥೆಗಳು ಆರ್‌ಸಿಎಸ್ ಮಾರ್ಗಗಳಿಗಾಗಿ ತಮ್ಮ ಪ್ರಸ್ತಾಪಗಳನ್ನು ಎಎಐನಲ್ಲಿ ಇ-ಬಿಡ್ಡಿಂಗ್ ಪೋರ್ಟಲ್ ಮೂಲಕ ಸಲ್ಲಿಸಬಹುದು.
ನವದೆಹಲಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮಂಗಳವಾರ (ಡಿಸೆಂಬರ್ 3) ಉಡಾನ್ ಯೋಜನೆಯಡಿ ವಿಮಾನಯಾನ ನಿರ್ವಾಹಕರನ್ನು ಆಯ್ಕೆ ಮಾಡಲು ತನ್ನ ಪ್ರಾದೇಶಿಕ ಸಂಪರ್ಕ ಯೋಜನೆಯ 4 ನೇ ಸುತ್ತಿನ ಬಿಡ್ಡಿಂಗ್ ಗೆ ಆಹ್ವಾನಿಸಿದೆ. ಆಸಕ್ತ ಸಂಸ್ಥೆಗಳು ಆರ್‌ಸಿಎಸ್ ಮಾರ್ಗಗಳಿಗಾಗಿ ತಮ್ಮ ಪ್ರಸ್ತಾಪಗಳನ್ನು ಎಎಐನಲ್ಲಿ ಇ-ಬಿಡ್ಡಿಂಗ್ ಪೋರ್ಟಲ್ ಮೂಲಕ ಸಲ್ಲಿಸಬಹುದು.
ನಾಲ್ಕನೇ ಸುತ್ತಿನ ಈ ಬಿಡ್ಡಿಂಗ್ ಯೋಜನೆ ಅಡಿಯಲ್ಲಿ ಈಶಾನ್ಯ ಪ್ರದೇಶ, ಹಿಮಾಚಲ ಪ್ರದೇಶ ಛತ್ತೀಸ್ ಗಡ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ದ್ವೀಪಗಳು, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಮತ್ತು ಲಡಾಖ್ ದೇಶಗಳಿಗೆ ವಾಯು ಸಂಪರ್ಕಕ್ಕೆ ಎಎಐ ಆದ್ಯತೆ ನೀಡಲಿದೆ. ಮೂಲಗಳ ಪ್ರಕಾರ ಕಷ್ಟಕರ ಭೂಪ್ರದೇಶಗಳಿಗೆ ಉಡಾನ್ 4.0 ಅಡಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ.
ಉಡಾನ್ ಯೋಜನೆಯಡಿ, ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರ ರಿಯಾಯಿತಿಯ ವಿಷಯದಲ್ಲಿ ಹಣಕಾಸಿನ ಪ್ರೋತ್ಸಾಹವನ್ನು ಆಯ್ದ ವಿಮಾನಯಾನ ಸಂಸ್ಥೆಗಳಿಗೆ ವಿಸ್ತರಿಸಲಾಗಿದೆ. 2017 ರ ಆರಂಭದಲ್ಲಿ ಹರಾಜಾದ ಮೊದಲ ಸುತ್ತಿನ ಬಿಡ್‌ಗಳಲ್ಲಿ ನೀಡಲಾದ ಅರ್ಧಕ್ಕಿಂತ ಹೆಚ್ಚು ಮಾರ್ಗಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಈ ಯೋಜನೆ ಯಶಸ್ವಿ ಹೊಂದಿಲ್ಲ ಎನ್ನಲಾಗಿದೆ
ಜನಸಾಮಾನ್ಯರಿಗೆ ಹಾರಾಟವನ್ನು ಹೆಚ್ಚು ಕೈಗೆಟುಕುವಂತೆ ಮಾಡಲು, ಸರ್ಕಾರವು 2016 ರಲ್ಲಿ ಉಡಾನ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ, ಸಣ್ಣ ಪಟ್ಟಣಗಳನ್ನು ಸಂಪರ್ಕಿಸಲು ಒಂದು ಗಂಟೆ ಪ್ರಯಾಣಕ್ಕಾಗಿ 2,500 ರೂ.ನಿಗದಿಪಡಿಸಿತ್ತು.
ವಿಶೇಷವೆಂದರೆ, ಮಾರ್ಚ್ 2017 ರಲ್ಲಿ ನಡೆದ ಮೊದಲ ಸುತ್ತಿನ ಹರಾಜಿನಲ್ಲಿ ಐದು ವಿಮಾನಯಾನ ಸಂಸ್ಥೆಗಳು 128 ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಮತ್ತು 325 ಮಾರ್ಗಗಳಲ್ಲಿ 15 ವಿಮಾನಯಾನ ಸಂಸ್ಥೆಗಳು, ಈ ವರ್ಷದ ಜನವರಿಯಲ್ಲಿ ನಡೆದ ಎರಡನೇ ಸುತ್ತಿನಲ್ಲಿ ಚಾಪರ್ ಕಾರ್ಯಾಚರಣೆಗೆ ಅವಕಾಶ ಪಡೆದಿದ್ದವು.
ಕಳೆದ ತಿಂಗಳು, ಉಡಾನ್ ಯೋಜನೆಗಾಗಿ ಮೂರನೇ ಸುತ್ತಿನ ಹರಾಜಿಗೆ ಸರ್ಕಾರ ಆಸಕ್ತ ಆಪರೇಟರ್‌ಗಳಿಂದ ಬಿಡ್‌ಗಳನ್ನು ಆಹ್ವಾನಿಸಿತ್ತು.