ಮುಂಬೈ: ಮಹಾರಾಷ್ಟ್ರದ ಪ್ರವಾಹದ ನಂತರ ಗಾಯಕಿ ಲತಾ ಮಂಗೇಶ್ಕರ್ ಮತ್ತು ಸೂಪರ್ ಸ್ಟಾರ್ ಅಮೀರ್ ಖಾನ್ ಕ್ರಮವಾಗಿ 11 ಲಕ್ಷ ಮತ್ತು 25 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.ಇದಕ್ಕೆ ಟ್ವೀಟ್ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.



COMMERCIAL BREAK
SCROLL TO CONTINUE READING

ಇತ್ತಿಚಿಗೆ ಸುರಿದ ಭಾರಿ ಮಳೆಯಿಂದಾಗಿ ಮಹಾರಾಷ್ಟ್ರ ನಲುಗಿ ಹೋಗಿತ್ತು. ಅಚ್ಚರಿ ಎಂದರೆ ಮಹಾರಾಷ್ಟ್ರದಲ್ಲಿನ ಮಹಾಬಲೆಶ್ವರ್ ಜಗತ್ತಿನಲ್ಲೇ ಅತಿ ಹೆಚ್ಚು ಮಳೆ ಸುರಿದ ಚಿರಾಪುಂಜಿಯನ್ನು ಹಿಂದೆ ಹಾಕಿ ಸುದ್ದಿ ಮಾಡಿತ್ತು. ಇಲ್ಲಿ ಸುರಿದ ಭಾರಿ ಮಳೆ ಪ್ರಭಾವ ಕರ್ನಾಟಕಕ್ಕೂ ತಲುಪಿ ಬೆಳಗಾವಿ ಜಿಲ್ಲೆಯನ್ನು ಭಾಗಶಃ ಜಲಾವೃತ ಮಾಡಿತ್ತು. 



ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಸುಮಾರು 54 ಜನರು ಸಾವನ್ನಪ್ಪಿದ್ದರಲ್ಲದೆ ನಾಲ್ಕು ಜನರು ನಾಪತ್ತೆಯಾಗಿದ್ದರು.ಸಾಂಗ್ಲಿ ಜಿಲ್ಲೆಯೊಂದರಲ್ಲೇ 26 ಸಾವು ಸಂಭವಿಸಿದ್ದು, ಕೊಲ್ಹಾಪುರದಲ್ಲಿ 10, ಸತಾರಾ 8, ಪುಣೆ 9 ಜನರು ಸಾವನ್ನಪ್ಪಿದ್ದರು. ಕೊಲ್ಹಾಪುರದಲ್ಲಿ ಇನ್ನೂ ಇಬ್ಬರು ಮತ್ತು ಸಾಂಗ್ಲಿ ಮತ್ತು ಪುಣೆಯಲ್ಲಿ ತಲಾ ಒಬ್ಬರು ಕಾಣೆಯಾಗಿದ್ದರು.