ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ  ಅನಿಲ್ ಬಾಜಪೇಯಿ ಅವರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು.


COMMERCIAL BREAK
SCROLL TO CONTINUE READING

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಎಎಪಿ ನಾಯಕರು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಬೆನ್ನಲ್ಲೇ ಬಾಜಪೇಯಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. 


ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ದೆಹಲಿ ಬಿಜೆಪಿ ಉಸ್ತುವಾರಿ ಶ್ಯಾಮ್ ಜಾಜು ಮತ್ತು ಕೇಂದ್ರ ಸಚಿವ ವಿಜಯ್ ಗೋಯಲ್ ಸಮ್ಮುಖದಲ್ಲಿ ದೆಹಲಿ ಘಟಕದ ಕಚೇರಿಯಲ್ಲಿ ಅನಿಲ್ ಬಾಜಪೇಯಿ ಬಿಜೆಪಿಗೆ ಸೇರ್ಪಡೆಗೊಂಡರು.


ಬಳಿಕ ಮಾತನಾಡಿದ ಅವರು, "ನಾನು ಹಲವು ವರ್ಷಗಳಿಂದ ಎಎಪಿ ಜೊತೆ ಕೆಲಸ ಮಾಡಿದ್ದೇನೆ. ಆದರೆ ಪಕ್ಷದಲ್ಲಿ ಗೌರವದ ಕೊರತೆ ಮತ್ತು ಇತರ ಕಾರ್ಯಚಟುವಟಿಕೆಗಳಿಂದ ನೊಂದು ಬಿಜೆಪಿಗೆ ಸೇರಿದ್ದೇನೆ" ಎಂದು ಹೇಳಿದರು.


ಎಎಪಿ ಪಕ್ಷದ 7 ಶಾಸಕರಿಗೆ ಬಿಜೆಪಿ 10 ಕೋಟಿ ರೂ.ಗಳ ಆಮಿಷ ಒಡ್ಡಿದೆ ಎಂದು ಬುಧವಾರ ಎಎಪಿ ನಾಯಕ ಮನೀಶ್ ಶಿಶೋಧ್ಯ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ತಳ್ಳಿ ಹಾಕಿದ ಬಾಜಪೇಯಿ, ತಾವು ಬಿಜೆಪಿ ಸೇರಲು ಯಾವ ಹಣವನ್ನೂ ಪಡೆದಿಲ್ಲ. ಅಷ್ಟಕ್ಕೂ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಆರೋಪಗಳನ್ನು ಮಾಡುವುದು ಮತ್ತು ಬಳಿಕ ಕ್ಷಮೆ ಕೇಳುವುದು ಅಭ್ಯಾಸವಾಗಿದೆ ಎಂದರು.