ಜೈಲಿನಲ್ಲಿ ಕುಸಿದು ಬಿದ್ದ ಎಎಪಿ ನಾಯಕ ಸತ್ಯೇಂದ್ರ ಜೈನ್; ಐಸಿಯುನಲ್ಲಿ ಚಿಕಿತ್ಸೆ
Satyendar Jain : ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ಸತ್ಯೇಂದ್ರ ಜೈನ್ ಅವರು ದೆಹಲಿಯ ತಿಹಾರ್ ಜೈಲಿನ ಸ್ನಾನ ಗೃಹದಲ್ಲಿ ಗುರುವಾರ (ಮೇ25) ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
AAP : ದೆಹಲಿಯ ಮಾಜಿ ಸಚಿವರಾಗಿರುವ ಜೈನ್ ಅವರು ಬೆಳಿಗ್ಗೆ ಜೈಲಿನಲ್ಲಿ ತಲೆಸುತ್ತಿ ಬಿದ್ದಿದ್ದು, ಕೂಡಲೇ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮದ್ಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಲೋಕನಾಯಕ ಜೈಪ್ರಕಾಶ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಎಪಿ ಟ್ವೀಟ್ ಮೂಲಕ ತಿಳಿಸಿದೆ.
ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿರ್ದೇಶನಾಲಯ ಬಂಧಿಸಿದೆ. ಈ ಹಿಂದೆಯು ಅವರು ಸ್ನಾನಗೃಹದಲ್ಲಿಯೇ ಬಿದ್ದಿದ್ದರು, ಇದರಿಂದ ಅವರ ಬೆನ್ನಿನ ಮೂಳೆಗೆ ಗಂಭೀರವಾದ ಗಾಯವಾಗಿತ್ತು ಎಎಪಿ ಹೇಳಿದೆ.
ಇದನ್ನೂ ಓದಿ-ಮುಂಗಾರು ಮಳೆ ಅಬ್ಬರ ಸಾಧ್ಯತೆ, ಕಾಫಿ ನಾಡಿನಲ್ಲಿ ಹೈ ಅಲರ್ಟ್
ವಿಚಾರಣಾಧೀನ ಕೈದಿಯಾಗಿರುವ ಸತ್ಯೇಂದ್ರ ಜೈನ್ ಅವರು ಬೆಳಿಗ್ಗೆ ಸುಮಾರು 6ಗಂಟೆ ವೇಳೆ ಕೇಂದ್ರ ಕಾರಾಗೃಹದ ವೈದ್ಯಕೀಯ ತಪಾಸಣೆ ಕೊಠಡಿಯ ಸ್ನಾನಗೃಹದಲ್ಲಿ ಜಾರಿ ಬಿದ್ದಿದ್ದಾರೆ. ನಿಶ್ಯಕ್ತಿಯ ಕಾರಣದಿಂದಾಗಿ ಅವರನ್ನು ಕಾರಾಗೃಹದ ಆಸ್ಪತ್ರೆಯಲ್ಲಿ ಇರಿಸಿ ನಿಗಾ ಇಡಲಾಗಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಯತ್ನಾಳ್ ಅವರೇ,ಪೊಲೀಸ್ ಇಲಾಖೆಯನ್ನು ಸಂವಿಧಾನಿಕರಣ ಮಾಡುತ್ತೇವೆ"
"ಜೈನ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಪ್ರತಿಕೂಲ ಸನ್ನಿವೇಶದ ವಿರುದ್ಧ ಹೋರಾಡಲು ದೇವರು ಅವರಿಗೆ ಶಕ್ತಿ ನೀಡಲಿ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಸತ್ಯೇಂದ್ರ ಜೈನ್ ಅವರು ಸೋಮವಾರ ಅನಾರೋಗ್ಯದ ಕಾರಣ ದೆಹಲಿಯ ಸಫ್ಜರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.