ಆರುಷಿ-ಹೇಮರಾಜ್ ಹತ್ಯಾಕಾಂಡ: ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಖುಲಾಸೆ
ಸಿಬಿಐ ತೀರ್ಪನ್ನು ರದ್ದುಗೊಳಿಸಿದ ಹೈ ಕೋರ್ಟ್, ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್.
ಅಲಹಾಬಾದ್: ಆರುಷಿ- ಹೇಮರಾಜ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅನ್ನು ದೋಷಮುಕ್ತಗೊಳಿಸಿ ಗುರುವಾರ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ಜಸ್ಟಿಸ್ ಬಿ.ಕೆ. ನಾರಾಯಣ್ ಮತ್ತು ಜಸ್ಟಿಸ್ ಅರವಿಂದ್ ಕುಮಾರ್ ಮಿಶ್ರಾ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ತಲ್ವಾರ್ ದಂಪತಿಗಳನ್ನು ದೋಷಮುಕ್ತರನ್ನಾಗಿ ಮಾಡಿದೆ. ಇಬ್ಬರೂ ಪ್ರಸ್ತುತ ದಾಸ್ನ ಜೈಲಿನಲ್ಲಿದ್ದು ನಾಳೆ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.
ಸಾಕ್ಷಾಧಾರಗಳ ಕೊರತೆಯಿಂದ ಹೈಕೋರ್ಟ್ ಸಿಬಿಐ ತೀರ್ಪನ್ನು ರದ್ದುಗೊಳಿಸಿದೆ. ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯ ದಂಪತಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.