ನವದೆಹಲಿ: ಇತ್ತೀಚಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಅಭಿಜಿತ್ ಬ್ಯಾನರ್ಜೀ ದೇಶದ ಬ್ಯಾಂಕಿಂಗ್ ಬಿಕ್ಕಟ್ಟಿಗೆ ಪರಿಹಾರ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೆ ಪರಿಹಾರವಾಗಿ ಅಭಿಜಿತ್ ಬ್ಯಾನರ್ಜಿ ಬ್ಯಾಂಕರ್‌ಗಳಲ್ಲಿ ಭಯದ ಮನೋಭಾವವನ್ನು ಕೊನೆಗೊಳಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಸರ್ಕಾರದ ಷೇರುಗಳನ್ನು ಶೇಕಡಾ 50 ಕ್ಕಿಂತ ಕಡಿಮೆಗೊಳಿಸಬೇಕು ಎಂದು ಹೇಳಿದ್ದಾರೆ.


'ಬ್ಯಾಂಕಿಂಗ್ ಬಿಕ್ಕಟ್ಟು ಭಯಾನಕವಾಗಿದೆ, ನಾವು ಅದರ ಬಗ್ಗೆ ಚಿಂತಿಸಬೇಕು, ಹೆಚ್ಚು ಜಾಗರೂಕರಾಗಿರಬೇಕು...ಒಂದು ದಿನ ಬ್ಯಾಂಕ್ ಉತ್ತಮವಾಗಿರುತ್ತದೆ ಮತ್ತು ನಂತರ ಇದ್ದಕ್ಕಿದ್ದಂತೆ ಅದು ಬಿಕ್ಕಟ್ಟಿಗೆ ಸಿಲುಕುತ್ತದೆ...ಬಿಕ್ಕಟ್ಟು ಸಂಭವಿಸುವ ಮುನ್ನವೇ ಅದನ್ನು ನಮಗೆ ತಡೆಯಲು ಸಾಧ್ಯವಿದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ ಇದಕ್ಕಾಗಿ ಕೆಲವು ಆಕ್ರಮಣಕಾರಿ ಬದಲಾವಣೆಗಳ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.


ಡೀಫಾಲ್ಟ್ ಪ್ರಕರಣಗಳಲ್ಲಿ ಸಿವಿಸಿ ತನಿಖೆಯ ಭಯದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕುಂಠಿತಗೊಳಿಸಿತು ಮತ್ತು ಬ್ಯಾಂಕರ್‌ಗಳು ಸಾಲ ನೀಡಲು ಬಯಸುವುದಿಲ್ಲ.  ಆದ್ದರಿಂದ ಇದಕ್ಕೆ ಪರಿಹಾರವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಸರ್ಕಾರಿ ಷೇರುಗಳನ್ನು ಶೇಕಡಾ 51 ಕ್ಕಿಂತ ಕಡಿಮೆಗೊಳಿಸುವುದರಿಂದ ಅವುಗಳನ್ನು ಸಿವಿಸಿಯ ವ್ಯಾಪ್ತಿಯಿಂದ ಹೊರತೆಗೆಯಬಹುದು ಎಂದು ಅವರು ಹೇಳಿದರು.


ಇದೆ ಸಂದರ್ಭದಲ್ಲಿ ಅಭಿಜಿತ್ ಬ್ಯಾನರ್ಜಿ ಆರ್ಥಿಕತೆ ಮತ್ತು ಯಾವುದೇ ವಿವಾದಾತ್ಮಕ ವಿಷಯದ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.