ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ ಅವರ ಸಾಮಾಜಿಕ ಖಾತೆಗಳ ಸುತ್ತಲೂ ಹರಡಿರುವ ವದಂತಿಗಳ ಕುರಿತಾಗಿ ಭಾರತೀಯ ವಾಯುಸೇನೆ ಈಗ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.



COMMERCIAL BREAK
SCROLL TO CONTINUE READING

ಈಗ ಟ್ವಿಟ್ಟರ್ ನಲ್ಲಿ ಅಭಿನಂದನ್ ಹೆಸರಿನಲ್ಲಿ ಸುಳಿದಾಡುತ್ತಿರುವ ಖಾತೆಗಳನ್ನು ಪಟ್ಟಿ ಮಾಡಿ."ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಪೋರ್ಟಲ್, ಫೇಸ್ಬುಕ್, ಇನ್ಸ್ಟಾಗ್ರ್ಯಾಮ್, ಹಾಗೂ ಟ್ವಿಟರ್ ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ. ಆದ್ದರಿಂದ ಯಾವುದೇ ಖಾತೆಗಳು ಅವರ ಹೆಸರಿನಲ್ಲಿದ್ದರೆ ಅವುಗಳನ್ನು ಬಳಸುವುದು ನಿಲ್ಲಿಸಿ" ಎಂದು ಐಎಎಫ್ ಎಚ್ಚರಿಸಿದೆ. 


ವಾಯುಸೇನೆ ದಾಳಿಯ ವೇಳೆ ಪಾಕ್ ವಶಕ್ಕೆ ಸಿಕ್ಕಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ನಂತರ ಶಾಂತಿಯ ಪ್ರತೀಕವಾಗಿ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದರು.ಈ ಹಿನ್ನಲೆಯಲ್ಲಿ ಅವರು ಭಾರತಕ್ಕೆ ಹಿಂತಿರುಗಿದ್ದರು. ಆದರೆ ಅವರು ಹಿಂತಿರುಗಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗಿದ್ದವು. ಈ ಹಿನ್ನಲೆಯಲ್ಲಿ ಇದರಿಂದ ಎಚ್ಚೆತ್ತುಕೊಂಡ ವಾಯುಸೇನೆಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತಾಗಿ ಸ್ಪಷ್ಟನೆ ನೀಡಿದೆ.