ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಅಲ್ಲಿನ ಭದ್ರತಾ ಪರಿಸ್ಥಿತಿ ಹಾಗೂ ಜನರ ಮೇಲಿನ ನಿರ್ಬಂಧಕ್ಕೆ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಲಿವುಡ್ ನಟಿ ಹಾಗೂ ರಾಜಕಾರಣಿ ಉರ್ಮಿಳಾ ಮಾತೊಂಡ್ಕರ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ 22 ದಿನಗಳಿಂದ ತನ್ನ ಪತಿಗೆ ಕಾಶ್ಮೀರದಲ್ಲಿ ವಾಸವಾಗಿರುವ ತನ್ನ ಹೆತ್ತವರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. "370 ನೇ ವಿಧಿಯನ್ನು ರದ್ದುಪಡಿಸುವುದರ ಬಗ್ಗೆ ಅಷ್ಟೇ ಅಲ್ಲ. ಅದನ್ನು ಅಮಾನವೀಯ ರೀತಿಯಲ್ಲಿ ಜಾರಿ ಮಾಡಲಾಗಿದೆ" ಎಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ನಿಂದ ಸ್ಪರ್ಧಿಸಿದ್ದ ಮಾತೋಂಡ್ಕರ್ ಸುದ್ದಿಗಾರರಿಗೆ ತಿಳಿಸಿದರು.


"ನನ್ನ ಮಾವ ಮತ್ತು ಅತ್ತೆ ಅಲ್ಲಿಯೇ ಇರುತ್ತಾರೆ.ಇಬ್ಬರೂ ಮಧುಮೇಹಿಗಳು, ಅಧಿಕ ರಕ್ತದೊತ್ತಡ ಹೊಂದಿದ್ದಾರೆ. ಇಂದು 22 ನೇ ದಿನ, ನಾನು ಅಥವಾ ನನ್ನ ಪತಿ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಅವರಿಗೆ ಮನೆಯಲ್ಲಿ ಔಷಧಿಗಳು ಲಭ್ಯವಿದೆಯೇ ಇಲ್ಲವೋ ಎನ್ನುವುದರ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಹೇಳಿದರು.