ನವದೆಹಲಿ: ಗುರುವಾರದಂದು ಅಂಕಿವ್ ಬೈಸೊಯಾ ಹೆಸರು ನಕಲಿ ಪದವಿ ಪ್ರಕರಣದಲ್ಲಿ ಬಂದ ಹಿನ್ನಲೆಯಲ್ಲಿ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅವರನ್ನು ಸಂಘಟನೆಯಿಂದ ವಜಾಗೊಳಿಸಿದೆ.


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ,ವಿಚಾರಣೆ ಮುಗಿಯುವವರೆಗೆ ಡುಸು(ದೆಹಲಿ ವಿದ್ಯಾರ್ಥಿ ಸಂಸ್ಥೆ) ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡಲು ಎಬಿವಿಪಿ ಬೈಸೊಯಾ ಅವರನ್ನು ಕೇಳಿಕೊಂಡಿದೆ.


ಸೆಪ್ಟೆಂಬರ್ ನಲ್ಲಿ ಎನ್ಎಸ್ಯುಐ ಸಂಘಟನೆಯು ಅಂಕಿವ್ ಬೈಸೊಯಾ ಅವರು ನಕಲಿ ಪದವಿ ಪ್ರಮಾಣ ಪತ್ರವನ್ನು ಚುನಾವಣೆ ಸಲ್ಲಿಸಿದ್ದಾರೆ ಎಂದು ಆರೋಪಿಸಿತ್ತು. ಎಬಿವಿಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಂಕಿವ್ ಬೈಸೋಯಾ ಅವರು  ತಾವು ತಿರುವಳ್ಳುವರ್ ವಿವಿಯಿಂದ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದರು.ಆದರೆ ಇದನ್ನು ವಿವಿ ಅಲ್ಲಗಳೆದು ಬೈಸೂಯಾ ಎಂದೂ ಕೂಡ ವಿವಿಯ ವಿದ್ಯಾರ್ಥಿಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದಾದ ನಂತರ ದೆಹಲಿ ವಿವಿಯ ಅಧಿಕಾರಿಗಳು ಈ ವಿಷಯದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.


ಇತ್ತ ಕಡೆ ಎನ್ಎಸಯುಐ ಸಂಘಟನೆಯು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಆರೆಸೆಸ್ಸ್ ಸಂಘಟನೆಯ ಮುಖಸ್ಥ ಮೋಹನ್ ಭಾಗವತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿತ್ತು.