ಈಗ ನನ್ನ ಚಾಲೆಂಜ್ ಸ್ವೀಕರಿಸಿ: ಪ್ರಧಾನಿ ಮೋದಿಗೆ ತೇಜಸ್ವಿ ಯಾದವ್ ಸವಾಲು
ನವದೆಹಲಿ: ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಪ್ರಧಾನಿಯವರಿಗೆ ಟ್ವಿಟರ್ ಮೂಲಕ ಸವಾಲು ಹಾಕಿದ್ದಾರೆ.
ಇತ್ತೀಚಿಗೆ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಫಿಟ್ ಕುರಿತಾಗಿ ವಿರಾಟ್ ಕೊಹ್ಲಿ ಹೃತಿಕ್ ರೋಷನ್ ಮತ್ತು ಸೈನಾ ನೆಹವಾಲ್ ರಿಗೆ ಚಾಲೆಂಜ್ ಹಾಕಿದ್ದರು.ಇದಕ್ಕೆ ಪ್ರತಿಯಾಗಿ ಪ್ರಧಾನಿಯವರಿಗೆ ಈ ಚಾಲೆಂಜ್ ನ್ನು ವಿರಾಟ್ ಕೊಹ್ಲಿ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಕೊಹ್ಲಿ ಚಾಲೆಂಜ್ ನ್ನು ಟ್ವೀಟರ್ ಮೂಲಕ ಸ್ವೀಕರಿಸಿದ್ದಾರೆ.
ಆದರೆ ಇದಕ್ಕೆ ಪ್ರತಿಯಾಗಿ ಚಾಲೆಂಜ್ ಹಾಕಿರುವ ತೇಜಸ್ವಿ ಯಾದವ್ "ವಿರಾಟ್ ಕೊಹ್ಲಿಯವರಿಂದ ಚಾಲೆಂಜ್ ಸ್ವೀಕರಿಸಿರುವುದರ ಕುರಿತಾಗಿ ಯಾವುದೇ ನಮ್ಮ ವಿರೋಧವಿಲ್ಲ. ಯುವಕರಿಗೆ ಉದ್ಯೋಗ ನಿಡುವ, ರೈತರಿಗೆ ಸಮಾಧಾನ ತರುವ, ದಲಿತ ಮತ್ತು ಅಲ್ಪಸಂಖ್ಯಾತರ ವಿರುದ್ದ ಹಿಂಸಾಚಾರದ ವಿರುದ್ದ ಕ್ರಮ ತೆಗೆದುಕೊಳ್ಳುವ ಕುರಿತಾದ ನನ್ನ ಚಾಲೆಂಜ್ ನ್ನು ಸ್ವೀಕರಿಸುತ್ತೀರಾ ನರೇಂದ್ರ ಮೋದಿ ಸರ್? ಎಂದು ಟ್ವೀಟ್ ಮೂಲಕ ಸವಾಲು ಹಾಕಿದ್ದಾರೆ.