ನವದೆಹಲಿ: ಇವಿಎಮ್  ಕುರಿತಾಗಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಕ್ಷೀಶ್ ಸಿಂಗ್ ವಿರ್ಕ್ ರನ್ನು ರಾಹುಲ್ ಗಾಂಧಿ ಬಿಜೆಪಿಯಲ್ಲಿ ನ ಅತಿ ಪ್ರಾಮಾಣಿಕ ವ್ಯಕ್ತಿ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿ ಶಾಸಕ ಬಕ್ಷೀಶ್ ಸಿಂಗ್ ವಿರ್ಕ್ ಇತ್ತೀಚಿಗೆ ಇವಿಎಂನಲ್ಲಿ ಯಾವ ಗುಂಡಿಗೆ ಒತ್ತಿದರೂ ಕೂಡ ಅದು ಬಿಜೆಪಿಗೆ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದರು, ಈ ಹಿನ್ನಲೆಯಲ್ಲಿ ಈಗ ಅವರ ವಿವಾದಾತ್ಮಕ ಪ್ರತಿಕ್ರಿಯೆಗೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ.



"ನೀವು ಯಾರಿಗೆ ಮತ ಹಾಕುತ್ತೀರೋ ಅದು ನಮಗೆ ತಿಳಿಯುತ್ತದೆ. ನಮಗೆ ಗೊತ್ತಿಲ್ಲ ಎಂದು ಭಾವಿಸಬೇಡಿ. ನಾವು ಉದ್ದೇಶಪೂರ್ವಕವಾಗಿ ನಿಮಗೆ ಹೇಳುವುದಿಲ್ಲ, ಆದರೆ ನಾವು ಬಯಸಿದರೆ ನಾವು ಕಂಡುಹಿಡಿಯಬಹುದು. ಏಕೆಂದರೆ ಮೋದಿಜಿ ಬುದ್ಧಿವಂತರು, ಮನೋಹರ್ಲಾಲ್ ಬುದ್ಧಿವಂತರು, ಎಂದು ಹೇಳಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.


"ನೀವು ಬಯಸುವವರಿಗೆ ನಿಮ್ಮ ಮತ ​​ಚಲಾಯಿಸಬಹುದು, ನಿಮ್ಮ ಮತವು ಕಮಲದ ಚಿನ್ಹೆ ಗೆ ಮಾತ್ರ ಹೋಗುತ್ತದೆ. ಯಾವುದೇ ಗುಂಡಿಯನ್ನು ಒತ್ತಿ, ಮತವು ಬಿಜೆಪಿಗೆ ಹೋಗುತ್ತದೆ. ನಾವು ಇವಿಎಂ ಯಂತ್ರಗಳಲ್ಲಿ ಒಂದು ಪೂರ್ಜಾ ಅನ್ನು ಸರಿಪಡಿಸಿದ್ದೇವೆ ಶಾಸಕರು ಘೋಷಿಸುತ್ತಾರೆ ಎಂದು ಹೇಳಿದ್ದರು.  


"ಕೆಲವು ಮಾಧ್ಯಮಗಳು ಈ ಕೃತ್ಯವನ್ನು ಮಾಡಿದ್ದಾರೆ ಮತ್ತು ಇಡೀ ವಿಷಯವನ್ನು ತಿರುಚಿದ್ದಾರೆ. ನಾನು ಚುನಾವಣಾ ಆಯೋಗವನ್ನು ಗೌರವಿಸುತ್ತೇನೆ ಮತ್ತು ಇವಿಎಂಗಳಲ್ಲಿ ನಂಬಿಕೆ ಹೊಂದಿದ್ದೇನೆ. ಮತದಾನ ಯಂತ್ರಗಳ ಬಗ್ಗೆ ನಾನು ಎಂದಿಗೂ ಹೇಳಲಿಲ್ಲ.  ಈ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ... ಇದು ನನ್ನನ್ನು ಮತ್ತು ನನ್ನ ಪಕ್ಷವನ್ನು ದೂಷಿಸುವ ಪಿತೂರಿ ಎಂದು ಹೇಳಿದ್ದರು.