ನವದೆಹಲಿ : ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ದೆಹಲಿಯ ಕಾರ್ಕಾರ್ಡೋಮ ನ್ಯಾಯಾಲಯ ಮೂವರು ಆರೋಪಿಗಳನ್ನು 2 ದಿನಗಳ ಪೋಲಿಸ್ ಬಂಧನಕ್ಕೆ ಆದೇಶಿಸಿದೆ. 


COMMERCIAL BREAK
SCROLL TO CONTINUE READING

ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ದೆಹಲಿಯ ಮದರ್​ ಖಜಾನಿ ಖಾಸಗಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಹಾಗೂ ತರಬೇತಿ ಶಾಲೆಯ ಬೋಧಕ ಸೇರಿ  ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 


ಸಿಬಿಎಸ್ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಮೂವರ ಬಂಧನ


ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ದೆಹಲಿ ಪೋಲಿಸ್ ಅಪರಾಧ ವಿಭಾಗದ ಅಧಿಕಾರಿಗಳು, "ಇಬ್ಬರು ಶಿಕ್ಷಕರು ಮತ್ತು ತರಬೇತಿ ಶಾಲೆಯ ಓರ್ವ ಶಿಕ್ಷಕನನ್ನು ಬಂಧಿಸಲಾಗಿದೆ. ಮೂವರನ್ನೂ  ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.


CBSE: 12 ನೇ ತರಗತಿ ಅರ್ಥಶಾಸ್ತ್ರ, 10ನೇ ತರಗತಿ ಗಣಿತ ವಿಷಯಗಳಿಗೆ ಮರುಪರೀಕ್ಷೆ


ಬಂಧಿತ ಶಿಕ್ಷಕರನ್ನು ರಿಷಬ್ ಮತ್ತು ರೋಹಿತ್ ಎಂದು ಗುರುತಿಸಲಾಗಿದ್ದು, ದೆಹಲಿಯ ಹೊರವಲಯದ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇವರು ಪ್ರಶ್ನೆಪತ್ರಿಕೆ ಫೋಟೋಗಳನ್ನು ಕ್ಲಿಕ್ಕಿಸಿ, ಟ್ರೇನಿಂಗ್ ಸೆಂಟರ್ ಮಾಲೀಕ ಟೌಖಿರ್'ಗೆ ಕಳುಹಿಸಿದ್ದು, ನಂತರ ಆತ ವಿದ್ಯಾರ್ಥಿಗಳಿಗೆ ರವಾನಿಸಿದ್ದಾನೆ ಎನ್ನಲಾಗಿದೆ. 


ಇಬ್ಬರು ಶಿಕ್ಷಕರೂ ನಿಯಮವನ್ನೂ ಮೀರಿ ಎರಡು ಗಂಟೆಗೂ ಮೊದಲೇ ಪೇಪರ್​ ಬಂಡಲ್​ ಓಪನ್​ ಮಾಡಿ ಈ ಕೃತ್ಯ ಎಸಗಿದ್ದರು. ಅಲ್ಲದೆ ಲೀಕ್​ ಆದ ಪೇಪರ್​ನಲ್ಲಿದ್ದ ಕೋಡ್ನಿಂದ ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗಿದೆ. ಪೇಪರ್​ ಫೋಟೋ ತೆಗೆದು ವಾಟ್ಸಪ್ ಕಳಿಸಿದಾಗ ಕೋಡ್​'ನಿಂದ ಯಾವ ಶಾಲೆಯಿಂದ ಲೀಕ್​ ಆಗಿದೆ ಎಂಬುದು ತಿಳಿಯುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 53 ವಿದ್ಯಾರ್ಥಿಗಳು, 9 ಶಿಕ್ಷಕರನ್ನು ವಿಚಾರಣೆ ನಡೆಸಲಾಗಿದೆ. ಇದರಲ್ಲಿ 9 ವಾಟ್ಸಪ್​​ ಗ್ರೂಪ್​ಗಳು ಭಾಗಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.


ಸಿಬಿಎಸ್ಇ 12ನೇ ತರಗತಿ ಅರ್ಥಶಾಸ್ತ್ರ ಮರುಪರೀಕ್ಷೆ ಏ.25ಕ್ಕೆ


ಅಲ್ಲದೆ, ಪ್ರಶ್ನೆಪತ್ರಿಕೆ ಕೈಬರಹ ರೂಪದಲ್ಲಿಯೂ ಸೋರಿಕೆಯಾಗಿದ್ದು, ಆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.