Actor Govinda Returns Politics: ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದಿರುವ ಬಾಲಿವುಡ್ ನಟ ಗೋವಿಂದ ಬರೋಬ್ಬರಿ 14ವರ್ಷಗಳ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ್ದಾರೆ. ಮಾಜಿ ಕಾಂಗ್ರೆಸ್ ಲೋಕಸಭಾ ಸಂಸದರಾಗಿರುವ ನಟ ಗೋವಿಂದ ಲೋಕಸಭಾ ಚುನಾವಣೆ 2024ರ ಮೊದಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಟ ಗೋವಿಂದ 1990ರ ದಶಕದ ಮಾಸ್ ಎಂಟರ್‌ಟೈನರ್,  ಅತ್ಯುತ್ತಮ ಕಾಮಿಕ್ ಟೈಮಿಂಗ್ ಮತ್ತು ಎಪಿಕ್ ಡ್ಯಾನ್ಸ್ ಸ್ಟೆಪ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಬಹು ಸೂಪರ್ಹಿಟ್ ಚಿತ್ರಗಳನ್ನು ನೀಡಿದ ಗೋವಿಂದ ಅವರು 2004 ರಲ್ಲಿ ಚುನಾವಣಾ ರಾಜಕೀಯಕ್ಕೆ ಬ್ಲಾಕ್ಬಸ್ಟರ್ ಎಂಟ್ರಿ ನೀಡಿದ್ದರು. ಆ ವರ್ಷ, "ಹೀರೋ ನಂ. 1" ನಟ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಮುಖಂಡ ರಾಮ್ ನಾಯಕ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದರು. 


ಇದನ್ನೂ ಓದಿ- ಬೆಂಗಳೂರು ಜನರ ಬಳಿ ಮತ ಯಾಚಿಸುವ ಧೈರ್ಯ ಕಾಂಗ್ರೆಸ್‌ಗಿಲ್ಲ : ಆರ್‌.ಅಶೋಕ್‌


ಶಿವಸೇನೆಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾತನಾಡಿದ ಗೋವಿಂದ ಅವರು 1980ರ ದಶಕದಲ್ಲಿ ನನ್ನ ನಟನಾ ಬದುಕು ಆರಂಭವಾಯಿತು. ಮೊದಲ ಬಾರಿಗೆ 2004 ರಿಂದ 2009 ರವರೆಗೆ ರಾಜಕೀಯದಲ್ಲಿ ಅನುಭವ ಹೊಂದಿದ್ದ ನಾನು ಮತ್ತೆ ಅದೇ ಕ್ಷೇತ್ರಕ್ಕೆ ಬರುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಸುದೀರ್ಘ 14 ವರ್ಷಗಳ ವನವಾಸದ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ್ದೇನೆ ಎಂದರು. 


ಇದನ್ನೂ ಓದಿ- Lok Sabha Election 2024: ಈ ಆಪ್ ಗಳಿಂದ ಅಂಗೈಯಲ್ಲಿ ಸಿಗಲಿದೆ ಚುನಾವಣಾ ಮಾಹಿತಿ...!


ನಟ ಗೋವಿಂದ ಅವರು ಶಿವಸೇನೆ ಸೇರ್ಪಡೆಗೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಶಿವಸೇನೆ ನಾಯಕ  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಬಹುಮುಖ ಪ್ರತಿಭೆಯಾಗಿರುವ ನಟ ಗೋವಿಂದ ಅವರು  ಪ್ರಗತಿಯ ಪರ ನಿಂತಿದ್ದಾರೆ. ಅವರು ಮೋದಿಜಿಯವರ ಅಭಿವೃದ್ಧಿ ನೀತಿಗಳಿಂದ ಪ್ರಭಾವಿತರಾಗಿದ್ದಾರೆ. . ಅವರು ಚಿತ್ರರಂಗದ ಕಲ್ಯಾಣ ಮತ್ತು ಪ್ರಗತಿಗೆ ಏನಾದರೂ ಮಾಡಬೇಕೆಂದು ಬಯಸುತ್ತಾರೆ ಎಂದು ತಿಳಿಸಿದರು. 


ಇದೀಗ ರಾಜಕೀಯದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಗೋವಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.