Nakul Mehta Marriage: ಸಿನಿಮಾ ರಂಗದಲ್ಲಿ ನಿಶ್ಚಿತಾರ್ಥ, ಮದುವೆ, ವಿಚ್ಛೇದನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್ ತೆಗೆದುಕೊಳ್ಳುವುದು, ವಿಚ್ಛೇದನ ನೀಡದೆ ಮತ್ತೊಂದು ಮದುವೆಯಾಗುವುದು ಅಥವಾ ಅಕ್ರಮ ಸಂಬಂಧದಿಂದ ಸಮಸ್ಯೆ ತಂದುಕೊಳ್ಳುವುದು ಈಗೀಗ ಹೆಚ್ಚಾಗಿ ಕೇಳಿ ಬರುತ್ತಿರುವ ವಿಚಾರಗಳು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಾಯದಿಂದ ಸ್ಟಾರ್ ವೇಗಿ Asia Cupನಿಂದ ಔಟ್: ಬದಲಿಗೆ 20 ವರ್ಷದ ಯುವ ಆಟಗಾರ ತಂಡಕ್ಕೆ ಎಂಟ್ರಿ!


ಈ ಎಲ್ಲದರ ಮಧ್ಯೆ ಇಲ್ಲೊಬ್ಬ ಸ್ಟಾರ್ ಕಿರುತೆರೆ ನಟ 18ನೇ ಬಾರಿಗೆ ಮದುವೆಯಾಗಲು ಮುಂದಾಗುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ನಟ ಬೇರಾರು ಅಲ್ಲ 40 ವರ್ಷ ವಯಸ್ಸಿನ ನಕುಲ್ ಮೆಹ್ತಾ. ಹಿಂದಿ ಧಾರಾವಾಹಿಗಳಲ್ಲಿ ಜನಪ್ರಿಯವಾಗಿರುವ ನಕುಲ್ ತನ್ನ ಅಭಿನಯದಿಂದಲೇ ಅನೇಕರ ಮನಗೆದ್ದವರು,


ಇಷ್ಟೆಲ್ಲಾ ಖ್ಯಾತಿ ಪಡೆದ ನಕುಲ್ ಮದುವೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರೇ ಹಂಚಿಕೊಂಡಿದ್ದಾರೆ. ಆದರೆ ಇಲ್ಲಿ ಸತ್ಯ ಸಂಗತಿ ಬೇರೆಯೇ ಇದೆ.


ನಕುಲ್ ಮೆಹ್ತಾ ನಿಜ ಜೀವನದಲ್ಲಿ ಮದುವೆ ಆಗಿರುವುದು ಒಬ್ಬಳ ಜೊತೆ. ಆದರೆ 17 ಬಾರಿ ಮದುವೆಯಾಗಿರುವುದು ಧಾರಾವಾಹಿಯಲ್ಲಿ.  ಇದೀಗ ಹೊಸ ಧಾರಾವಾಹಿಯಲ್ಲಿ ನಟಿಸಲಿರುವ ನಕುಲ್’ಗೆ ಅಲ್ಲಿಯೂ ಮದುವೆಗೆ ದೃಶ್ಯ ಇರಲಿದೆ ಎಂಬುದು ತಿಳಿದಿದೆ. ಈ ಕಾರಣದಿಂದ ತಮಾಷೆಯಾಗಿ ನಾನು 18ನೇ ಬಾರಿ ಮದುವೆಯಾಗುತ್ತಿದ್ದೇನೆಂದು ಹೇಳಿದ್ದಾರೆ.


ಇದನ್ನೂ ಓದಿ: ಸಚಿನ್ ಶ್ರೇಷ್ಠ ದಾಖಲೆ ಮುರಿಯುವತ್ತ ರೋಹಿತ್ ಹೆಜ್ಜೆ:ಇತಿಹಾಸ ನಿರ್ಮಿಸಲು ಬೇಕಿದೆ ಇಷ್ಟು ರನ್…


ನಕುಲ್ ಮೆಹ್ತಾ 2012ರಲ್ಲಿ ಜಾನಕಿ ಎಂಬವರನ್ನು ಅಗ್ನಿಸಾಕ್ಷಿಯಾಗಿ ಮದುವೆಯಾಗಿದ್ದಾರೆ. ಈ ದಂಪತಿಗೆ ಮುದ್ದಾದ ಮಗು ಕೂಡ ಇದೆ. ತೆಲುಗು, ಹಿಂದಿ ಮತ್ತು ವೆಬ್ ಸೀರೀಸ್’ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ನಕುಲ್ ಅಲ್ಲಿ ಅಭಿನಯಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ