ನವದೆಹಲಿ: ನಟಿ ಮತ್ತು ರಾಜಕಾರಣಿ, ಮಾಜಿ ಲೋಕಸಭಾ ಸದಸ್ಯೆ ವಿಜಯಶಾಂತಿ ಕಾಂಗ್ರೆಸ್‌ ತೊರೆದು ಇಂದು ಬಿಜೆಪಿ ಸೇರ್ಪೆಡೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ವಾರ ವಿಜಯಶಾಂತಿ(Vijayashanti) ಕಾಂಗ್ರೆಸ್‌ ತೊರೆದಿದ್ದರು. ಆಗಲೇ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಭಾನುವಾರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಅವರು, ಇಂದು ಅಧಿಕೃತವಾಗಿ ಪಕ್ಷ ಸೇರಿದ್ದಾರೆ.


Ticket ಕಾಯ್ದಿರಿಸುವ ಪದ್ಧತಿಯಲ್ಲಿ ಬದಲಾವಣೆ ತಂದ Indian Railways, ಯಾತ್ರಿಗಳಿಗೆ ಲಾಭ, Railways ನೀಡಿದ ಮಾಹಿತಿ ಇದು


54 ವರ್ಷದ ವಿಜಯಶಾಂತಿ 1997ರಲ್ಲಿ ಬಿಜೆಪಿಯಿಂದಲೇ ತಮ್ಮ ರಾಜಕೀಯ ಪಯಣ ಶುರು ಮಾಡಿದ್ದರು. ನಂತರ ತಮ್ಮದೇ 'ತಲ್ಲಿ ತೆಲಂಗಾಣ' ಎಂಬ ಪಕ್ಷವನ್ನೂ ಸ್ಥಾಪಿಸಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಪಕ್ಷವನ್ನು ಟಿಆರ್‌ಎಸ್‌ನೊಂದಿಗೆ ವಿಲೀನಗೊಳಿಸಿದ್ದರು. ಬಳಿಕ 2009ರಲ್ಲಿ ಲೋಕಸಭೆಗೂ ಆಯ್ಕೆಯಾಗಿದ್ದರು. ಆದರೆ 2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾಗುತ್ತಿದ್ದಂತೆ ಕಾಂಗ್ರೆಸ್‌ಗೆ ಹಾರಿದರು.


Airtel ಬಂಪರ್ ಆಫರ್! ಅಗ್ಗದ ದರದಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯ


ಇದೀಗ 2023ರ ತೆಲಂಗಾಣ ವಿಧಾನಸಭೆ ಚುನಾಣೆಯಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗಲು ಬಿಜೆಪಿ ನಿರ್ಧರಿಸಿರುವಾಗಲೇ ವಿಜಯಶಾಂತಿ ಕಾಂಗ್ರೆಸ್‌ ತೊರೆದು ಕಮಲ ಹಿಡಿದಿದ್ದಾರೆ.


ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಬಿಜೆಪಿ 150ರಲ್ಲಿ 48 ಸ್ಥಾನಗಳನ್ನು ಗೆದ್ದು ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ಈ ಗೆಲುವು ಹಾಗೂ ಈಗ ವಿಜಯಶಾಂತಿ ಆಗಮನದೊಂದಿಗೆ ಮತ್ತಷ್ಟು ಗಟ್ಟಿಯಾಗಿ ತೆಲಂಗಾಣದಲ್ಲಿ ತಳವೂರುವ ಸೂಚನೆಯನ್ನು ಬಿಜೆಪಿ ನೀಡಿದೆ.


Bharat Bandh: ನಾಳೆ ಏನಿರುತ್ತೆ? ಏನಿರಲ್ಲ?


ಇನ್ನೊಂದೆಡೆ ಹೈದರಾಬಾದ್‌ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳಲ್ಲಿ ಗೆದ್ದು ಹೀನಾಯ ಪ್ರದರ್ಶನ ತೋರಿದ್ದ ಕಾಂಗ್ರೆಸ್‌ ಮತ್ತೊಂದು ಆಘಾತ ಅನುಭವಿಸಿದೆ. ಅತ್ತ ತಮಿಳುನಾಡಿನಲ್ಲಿ ಖುಷ್ಬು ಸುಂದರ್‌ ಕಾಂಗ್ರೆಸ್‌ ತೊರೆದ ಬೆನ್ನಲ್ಲೇ ಇತ್ತ ತೆಲಂಗಾಣದಲ್ಲಿ ವಿಜಯಶಾಂತಿ ಇದೇ ನಡೆ ಅನುಸರಿಸಿದ್ದಾರೆ.


BJP: 2024ರ ಲೋಕ ಚುನಾವಣೆ: ಬಿಜೆಪಿ ವಿಭಾಗಗಳು 18 -28 ಕ್ಕೆ ಏರಿಕೆ! ಇಲ್ಲಿದೆ ಡಿಟೇಲ್ಸ್


ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭಯೋತ್ಪಾದಕ, ಸರ್ವಾಧಿಕಾರಿ ಎಂದೆಲ್ಲ ಜರೆದಿದ್ದ ವಿಜಯಶಾಂತಿ, ಕಳೆದ ಕೆಲ ತಿಂಗಳಿನಿಂದ ಕಾಂಗ್ರೆಸ್‌ನಿಂದ ಮಾನಸಿಕವಾಗಿ ದೂರವಾಗಿದ್ದರು. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಬೇಸರಗೊಂಡಿದ್ದರು. ಜೊತೆಗೆ ತೆಲಂಗಾಣದಲ್ಲಿ ಪಕ್ಷ ಹೀನಾಯ ಸ್ಥಿತಿ ತಲುಪಿದ್ದರಿಂದಲೂ ಅಸಮಧಾನಗೊಂಡಿದ್ದರು. ಇದೀಗ ಪಕ್ಷದಿಂದಲೇ ಹೊರಬಂದು, ವಿರೋಧಿ ಪಾಳಯ ಸೇರಿದ್ದಾರೆ.


EPFO: ನಿಮ್ಮ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದು ತಿಳಿಯಲು ಒಂದೇ ಒಂದು ಮಿಸ್ಡ್ ಕಾಲ್ ಸಾಕು..!