ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಗೆ ಭೇಟಿ ನೀಡಿದ ಸಮಯದಲ್ಲಿ ಹಿಂಸಾಚಾರ ನಡೆದಿರುವುದು ಗುಪ್ತಚರ ಸಂಸ್ಥೆಗಳು ಮತ್ತು ಗೃಹ ಸಚಿವಾಲಯದ ವೈಫಲ್ಯ ಎಂದು ನಟ ರಜನಿಕಾಂತ್ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.


COMMERCIAL BREAK
SCROLL TO CONTINUE READING

ಏಜೆನ್ಸಿಗಳು ಜಾಗರೂಕತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಗುಪ್ತಚರ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡಬೇಕಾಗಿತ್ತು ಎಂದು ಅವರು ಹೇಳಿದರು, ಹಿಂಸಾಚಾರವನ್ನು ಕಠಿಣವನ್ನು ನಿಭಾಯಿಸಬೇಕು, ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದೆ ಜಾಗರೂಕರಾಗಿರುತ್ತಾರೆ ಎಂದು ರಜನಿಕಾಂತ್ ಆಶಿಸಿದರು.


ಚೆನ್ನೈ ನಲ್ಲಿರುವ ತಮ್ಮ ಪೋಯಸ್ ಗಾರ್ಡನ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್, ಪೌರತ್ವ ತಿದ್ದುಪಡಿ ಕಾಯ್ದೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುತ್ತಿರುವುದು ಕಂಡು ಬಂದರೆ ಮುಸ್ಲಿಮರ ಸಮುದಾಯದೊಂದಿಗೆ ನಿಲ್ಲುವ ಮೊದಲ ವ್ಯಕ್ತಿ ತಾವು ಎಂದು ರಜನಿಕಾಂತ್ ಪುನರುಚ್ಚರಿಸಿದರು.


ಇದೇ ವೇಳೆ ದೆಹಲಿಯಲ್ಲಿನ ಹಿಂಸಾಚಾರದ ಬಗ್ಗೆ ಮಾತನಾಡಿದ ರಜಿನಿಕಾಂತ್, "ಇದು ಗುಪ್ತಚರ ವೈಫಲ್ಯ ಮತ್ತು ನಾನು ಕೇಂದ್ರ ಸರ್ಕಾರವನ್ನು ಟೀಕಿಸುತ್ತೇನೆ" ಎಂದು ಹೇಳಿದರು. ದೆಹಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಡಿದ ದ್ವೇಷದ ಭಾಷಣಗಳ ಬಗ್ಗೆ ಕೇಳಿದಾಗ, ರಜಿನಿ ಎಲ್ಲರನ್ನೂ ದೂಷಿಸಲು ಸಾಧ್ಯವಿಲ್ಲ, ಕೆಲವರ ಮಾತುಗಳಿಗೆ ಹೊಣೆಗಾರರಾಗಿದ್ದಾರೆ ಎಂದು ಹೇಳಿದರು. ಮಾಧ್ಯಮಗಳು ಸಂಯಮದಿಂದಿರಬೇಕು ಮತ್ತು ಇಂತಹ ಪರಿಸ್ಥಿತಿ ಯಾರನ್ನೂ ಪ್ರಚೋದಿಸಬಾರದು ಎಂದರು.


'ಕೆಲವು ಪಕ್ಷಗಳು ಧರ್ಮವನ್ನು ಬಳಸಿಕೊಂಡು ರಾಜಕೀಯವನ್ನು ಆಡುತ್ತಿವೆ ಮತ್ತು ಜನರನ್ನು ಪ್ರಚೋದಿಸುತ್ತಿವೆ, ಇದು ಸರಿಯಾದ ಮಾರ್ಗವಲ್ಲ. ಕೇಂದ್ರ ಸರ್ಕಾರವು ಈ ಹಿಂಸಾಚಾರವನ್ನು ತಣಿಸದಿದ್ದರೆ ಅದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಯಾಗುತ್ತದೆ ”ಎಂದು ಅವರು ಹೇಳಿದರು.