celebrities who had extra-marital affairs: ಬಾಲಿವುಡ್ ಸೆಲೆಬ್ರಿಟಿಗಳನ್ನು ಅವರ ಅಭಿಮಾನಿಗಳು ಪೂಜಿಸುತ್ತಾರೆ. ಆದರೆ ಅವೆಲ್ಲದಕ್ಕಿಂತ ಹೆಚ್ಚಾಗಿ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅದರಲ್ಲಿ ಹೈಲೈಟ್ ಆಗುತ್ತಿರುವ ವಿಷಯವೆಂದರೆ ವಿವಾಹೇತರ ಸಂಬಂಧಗಳು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡಿದ್ದೆ, ಆದ್ರೆ ಗಂಭೀರ್ ಯಾವಾಗಲೂ ನನಗೆ… ನಟಿಯ ಹೇಳಿಕೆ


ಬಿ-ಟೌನ್’ನಲ್ಲಿ ಇದು ಸಾಮಾನ್ಯದಂತಾಗಿದೆ. ಮದುವೆಯಾಗಿ ಮಕ್ಕಳಿದ್ದರೂ ಸಹ ನಟಿಯರ ಜೊತೆ ವಿವಾಹೇತರ ಸಂಬಂಧಗಳನ್ನು ಕೆಲ ನಟರು ಹೊಂದಿದ್ದು, ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.


ಈ ಪಟ್ಟಿಯಲ್ಲಿ ಬೋನಿ ಕಪೂರ್ ಹೆಸರಿದೆ. ಬೋನಿ ಮತ್ತು ಅವರ ಪತ್ನಿ ಮೋನಾ ಶೌರಿ ನಡುವೆ ವೈಮನಸ್ಸು ಮೂಡಿಸಿದ್ದು ಶ್ರೀದೇವಿ ಎಂಬ ಆರೋಪ ಕೇಳಿಬಂದಿತ್ತು. ಆರಂಭದಲ್ಲಿ ಶ್ರೀದೇವಿ ಮೋನಾ ಸ್ನೇಹಿತರಾಗಿದ್ದರು. ಬೋನಿಯವರನ್ನು ರಾಖಿ ಸಹೋದರ ಎಂದೆಲ್ಲಾ ಪರಿಗಣಿಸಿದ್ದ ಕಾರಣ ಶ್ರೀದೇವಿಯವರನ್ನು ಆಕೆಯ ಮನೆಯಲ್ಲೇ ಇರಿಸಿಕೊಂಡಿದ್ದರು. ಆದರೆ ಶ್ರೀದೇವಿ ಜೊತೆ ಬೋನಿ ದೈಹಿಕ ಸಂಬಂಧ ಬೆಳೆಸಿದ್ದರು. ಈ ವಿಚಾರ ಮೋನಾ ಅವರಿಗೆ ತಿಳಿದು ಹೃದಯ ಒಡೆದಂತಾಯಿತು. ಆ ಬಳಿಕ ಮೋನಾ ಅವರೇ ಬೋನಿಯಿಂದ ದೂರವಾದರು ಎಂದು ಹೇಳಲಾಗುತ್ತದೆ.


ಸೈಫ್ ಮತ್ತು ರೋಸಾ ಕ್ಯಾಟಲಾನೊ ಅವರು ಕೀನ್ಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ಈ ಭೇಟಿಯ ಬಳಿಕ ಇಬ್ಬರ ನಡುವೆ ಪ್ರಣಯ ಪ್ರಾರಂಭವಾಯಿತು. ಇಟಾಲಿಯನ್ ನರ್ತಕಿ ಕ್ಯಾಟಲಾನೊಗೆ ಸೈಫ್’ಗೆ ಮದುವೆಯಾಗಿದೆ ಎಂದು ತಿಳಿದಿರಲಿಲ್ಲ. ಆದರೆ ಭಾರತಕ್ಕೆ ಆಗಮಿಸಿದ ಬಳಿಕ ಆ ವಿಚಾರ ತಿಳಿಯಿತು. ದಿ ಬ್ರೈಡಲ್ ಬಾಕ್ಸ್ ಪ್ರಕಾರ, ಸೈಫ್ ಪತ್ನಿ ಅಮೃತಾ ಸಿಂಗ್ ತಮ್ಮ ಪತಿಯ ಈ ಸಂಬಂಧದಿಂದ ಬಹಳಷ್ಟು ನೊಂದಿದ್ದರು ಎನ್ನಲಾಗಿದೆ.


ಇನ್ನೊಬ್ಬ ಸೆಲೆಬ್ರಿಟಿ ಆದಿತ್ಯ ಪಾಂಚೊಲಿ, ನಟಿ ಕಂಗನಾ ರನೌತ್ ಜೊತೆ  ಡೇಟಿಂಗ್ ಮಾಡುತ್ತಿದ್ದರು ಎಂದು ಆರೋಪಿಸಿದ್ದರು. ಆದರೆ ಕಂಗನಾ ಈ ವದಂತಿಗಳನ್ನು ನಿರಾಕರಿಸಿದ್ದಲ್ಲದೆ, ನಿಂದನೆಯ ಆರೋಪವನ್ನು ಮಾಡಿದ್ದರು.


ಇದನ್ನೂ ಓದಿ: ಕೇವಲ 20 ರನ್ ಗಳಿಸಿದ್ರೆ ವಿರಾಟ್-ರೋಹಿತ್’ರ ಈ 3 ವಿಶ್ವದಾಖಲೆಗಳನ್ನೇ ಬ್ರೇಕ್ ಮಾಡಲಿದ್ದಾರೆ ಸೂರ್ಯ


ಈ ಶತ್ರುಘ್ನ ಮತ್ತು ರೀನಾ ರಾಯ್ ನಡುವಿನ ಪ್ರಣಯವು ಭಾರೀ ಸುದ್ದಿ ಮಾಡಿತ್ತು. ಅವರ ಜೀವನಚರಿತ್ರೆ ‘ಎನಿಥಿಂಗ್ ಬಟ್ ಖಾಮೋಶ್’ನಲ್ಲಿ ಪೂನಂ ಸಿನ್ಹಾ ಅವರನ್ನು ವಿವಾಹವಾಗಿದ್ದರೂ ಸಹ, ರೀನಾ ಅವರೊಂದಿಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ