ನವದೆಹಲಿ: ಕರೋನವೈರಸ್ (Coronavirus) ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ಅದಾನಿ ಗ್ರೂಪ್( Adani Group) ಲಕ್ನೋ, ಮಂಗಳೂರು ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕನಿಷ್ಠ ಆರು ತಿಂಗಳು ಕೋರಿದೆ. 


COMMERCIAL BREAK
SCROLL TO CONTINUE READING

ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (Airport Authority of India) ವು 2019 ರಲ್ಲಿ ತನ್ನ ಆರು ವಿಮಾನ ನಿಲ್ದಾಣಗಳನ್ನು ಬಿಡ್ ಮಾಡಿತ್ತು ಮತ್ತು ಅದಾನಿ ಗ್ರೂಪ್ ಅಹಮದಾಬಾದ್, ತಿರುವನಂತಪುರಂ, ಲಕ್ನೋ, ಮಂಗಳೂರು, ಜೈಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳೆಲ್ಲಕ್ಕೂ ಅತಿ ಹೆಚ್ಚು ಬಿಡ್ದಾದರರಾಗಿ ಹೊರಹೊಮ್ಮಿದೆ.


ಜೈಪುರ, ತಿರುವನಂತಪುರ ಮತ್ತು ಗುವಾಹಟಿಯ ಬಿಡ್‌ಗಳನ್ನು ಕೇಂದ್ರ ಸಚಿವ ಸಂಪುಟ ಇನ್ನೂ ಅಂಗೀಕರಿಸಿಲ್ಲವಾದರೂ, ಅದಾನಿ ಗ್ರೂಪ್ 2020 ರ ಫೆಬ್ರವರಿಯಲ್ಲಿ ಉಳಿದ ಮೂರು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸ್ವಾಧೀನದ ಒಪ್ಪಂದಕ್ಕೆ ಸಹಿ ಹಾಕಿತು.


ಕಳೆದ ವರ್ಷ ನವೆಂಬರ್‌ನಲ್ಲಿ, ಎಎಐ ನಡೆಸುವ ಆರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ನಿರ್ವಹಿಸುವ ಪ್ರಸ್ತಾಪವನ್ನು ಸರ್ಕಾರ ತೆರವುಗೊಳಿಸಿತ್ತು. ಈ ಕ್ರಮವು ಮಧ್ಯಸ್ಥಗಾರರಿಗೆ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸುವ ಉಪಕ್ರಮದ ಭಾಗವಾಗಿದೆ ಎಂದು ಎಎಐ ಹೇಳಿದೆ.


ವಿಶ್ವಾದ್ಯಂತ ಲಾಕ್‌ಡೌನ್‌ನಲ್ಲಿ ಹಿನ್ನಲೆಯಲ್ಲಿ ವಾಯುಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರಿತ್ತು . ಮಾರ್ಚ್‌ನಲ್ಲಿ ಭಾರತದಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ, ಹೆಚ್ಚಿನ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದರ ಜೊತೆಗೆ ನೌಕರರ ಸಂಬಳವನ್ನು ಕಡಿತಗೊಳಿಸಿದ್ದವು.


60 ದಿನಗಳ ಲಾಕ್‌ಡೌನ್ ನಂತರ, ಸರ್ಕಾರವು ಕಳೆದ ತಿಂಗಳು ದೇಶೀಯ ವಿಮಾನಯಾನ ಪ್ರಯಾಣವನ್ನು ಪ್ರಾರಂಭಿಸಿತು. ಸೋಂಕು ಹರಡದಂತೆ ಖಚಿತಪಡಿಸಿಕೊಳ್ಳಲು ಹೆಚ್ಚಿನ ವಿಮಾನ ನಿಲ್ದಾಣಗಳು ಹಲವಾರು ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿವೆ.


ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರು "ಹಲವಾರು ಅಂಶಗಳನ್ನು ಗಮನಿಸಿದ ನಂತರ" ಅಂತರರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.