ಆಧಾರ ಕಾರ್ಡ್ ಕಡ್ಡಾಯ: `ತುಘಲಕ್ ರಾಜ್`ಗೆ ಹೋಲಿಸಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯು ಸರ್ಕಾರದ ಯೋಜನೆಗಳನ್ನು ಪಡೆಯಲು ಕೇಂದ್ರ ಸರಕಾರವು ಕಡ್ಡಾಯಗೊಳಿಸಿರುವುದು ಒಂದು ರೀತಿಯಲ್ಲಿ ತುಘಲಕ್ ರಾಜ್ಯದಲ್ಲಿ ಪತಿ ಪತ್ನಿಯನ್ನು ಸಾರ್ವಜನಿಕವಾಗಿ ಮತಾಂತರ ಮಾಡುವಂತಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯು ಸರ್ಕಾರದ ಯೋಜನೆಗಳನ್ನು ಪಡೆಯಲು ಕೇಂದ್ರ ಸರಕಾರವು ಕಡ್ಡಾಯಗೊಳಿಸಿರುವುದು ಒಂದು ರೀತಿಯಲ್ಲಿ ತುಘಲಕ್ ರಾಜ್ಯದಲ್ಲಿ ಪತಿ ಪತ್ನಿಯನ್ನು ಸಾರ್ವಜನಿಕವಾಗಿ ಮತಾಂತರ ಮಾಡುವಂತಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ 12 ಸಂಖ್ಯೆಗಳ ಯೋಜನೆಯನ್ನು ಬ್ಯಾಂಕಿನ ಖಾತೆ ಮತ್ತು ಮೊಬೈಲ್ ನಂಬರಗಳಿಗೆ ಕಡ್ಡಾಯ ಗೊಲಿಸಿರುವುದು ಅಪಾಯಕಾರಿ ಎಂದರು. ಇದರ ಮೂಲಕವಾಗಿ ಕೇಂದ್ರಸರ್ಕಾರವು ತಾಯಿ-ಮಗಳ ,ಗಂಡ-ಹೆಂಡತಿಯ ವೈಯಕ್ತಿಕ ಸಂಭಾಷಣೆಗಳನ್ನೂ ಸರ್ಕಾರ ಆಲಿಸುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಡ ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಪಾನ್ ಕಾರ್ಡ್ ಮತದಾನ ಚೀಟಿಗಳಿವೆ ಆದರೆ ಸದ್ಯ ಆಧಾರ ಕಾರ್ಡಿನ ಹೆಸರಲ್ಲಿ ನಡೆಯುತ್ತಿರುವ ಎಲ್ಲ ಸಂಗತಿಗಳು ಯಾವುದೇ ವ್ಯಕ್ತಿ ಮತ್ತು ಸಮಾಜಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿದರು.
ಈ ಹಿಂದೆ ಅಕ್ಟೋಬರ್ 30 ರಂದು ಮಮತಾ ಬ್ಯಾನರ್ಜಿ ಸರ್ಕಾರವು ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಕೇಂದ್ರ ಸರ್ಕಾರವು ಕಡ್ಡಾಯ ಗೊಳಿಸಿರುವ ಯೋಜನೆಯನ್ನು ಖಂಡಿಸಿ ಕೋರ್ಟ್ ನ ಮೆಟ್ಟಿಲೇರಿದ್ದರು ಅಲ್ಲದೆ ಈ ಯೋಜನೆ ಒಕ್ಕೂಟ ವ್ಯವಸ್ತೆಗೆ ಅಪಾಯಕಾರಿ ಎಂದು ಕೋರ್ಟ್ ಗೆ ತಿಳಿಸಿದ್ದರು.ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್ ವೈಯಕ್ತಿಕ ಅರ್ಜಿಯ ಮೂಲಕ ಕೋರ್ಟ್ ಗೆ ಮನವಿ ಮಾಡಿಕೊಳ್ಳಿ ಎಂದು ಈ ಅರ್ಜಿಯನ್ನು ಸಾರಸಗಟಾಗಿ ತಿರಸ್ಕರಿಸಿದ್ದನ್ನು ಈ ಸಂಧರ್ಭದಲ್ಲಿ ನೆನೆಯಬಹುದು.