ನವದೆಹಲಿ: ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯ ಅಂತಿಮ ಪಟ್ಟಿ ಘೋಷಣೆಯಾದ ನಂತರ ವ್ಯಂಗ್ಯ ವಾಡಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಂಸತ್ತಿನಲ್ಲಿ ಎನ್‌ಆರ್‌ಸಿಯನ್ನು ಸಹ ನಡೆಸಬೇಕು ಎಂದು ಹೇಳಿದರು


COMMERCIAL BREAK
SCROLL TO CONTINUE READING

ಅಂತಿಮ ಎನ್‌ಆರ್‌ಸಿ ಪಟ್ಟಿ ವಿಚಾರವಾಗಿ  ಶನಿವಾರ 10 ಜನಪಥದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಸಭೆ ಸೇರಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ಸರಿಯಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ ಎಂದರು.


"ದೇಶವು ಅವರಿಗೆ ಸೇರಿದ್ದು, ಅವರು ಎಲ್ಲಿ ಬೇಕಾದರೂ ಎನ್‌ಆರ್‌ಸಿಯನ್ನು ನಡೆಸಬೇಕು. ಅವರಿಗೆ ಅಸ್ಸಾಂ ಎನ್‌ಆರ್‌ಸಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ, ಅವರು ಇತರ ರಾಜ್ಯಗಳಿಗೂ ಹೋಗಬಹುದು. ಅವರು ಸಂಸತ್ತಿನಲ್ಲೂ ಎನ್‌ಆರ್‌ಸಿ ನಡೆಸಬೇಕು. ನನ್ನ ತಂದೆ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದರಿಂದ ನಾನು ಸಹ ಹೊರಗಿನವನು ಎಂದು ಅಧೀರ್ ರಂಜನ್ ಚೌಧರಿ ಹೇಳಿದರು."ಯಾವುದೇ ಸ್ಥಿತಿಯಲ್ಲಿ ಯಾವುದೇ ನಿಜವಾದ ನಾಗರಿಕನನ್ನು ಹೊರಹಾಕಬಾರದು ಮತ್ತು ಎಲ್ಲಾ ನಿಜವಾದ ನಾಗರಿಕರಿಗೆ ರಕ್ಷಣೆ ನೀಡಬೇಕು" ಎಂದು ಅವರು ಹೇಳಿದರು. 


ಜನಪಥ್ 10ರಲ್ಲಿ ನಡೆದ ಸಭೆಯಲ್ಲಿ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಎ.ಕೆ. ಆಂಟನಿ, ಗೌರವ್ ಗೊಗೊಯ್ ಮತ್ತು ಇತರರು ಭಾಗವಹಿಸಿದ್ದರು.


ಮತ್ತೊಂದೆಡೆ, ದೆಹಲಿಯಲ್ಲಿ ಎನ್‌ಆರ್‌ಸಿ ಅಗತ್ಯವಿದೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ. ದೆಹಲಿಯಲ್ಲಿ ಎನ್‌ಆರ್‌ಸಿ ತರಹದ ಕಾರ್ಯ ನಡೆಸುವುದು ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವಾಗಲಿದೆ ಎಂದು ತಿವಾರಿ ಹೇಳಿದರು.


ಅಸ್ಸಾಂನಲ್ಲಿನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯ ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದ್ದು, 19 ಲಕ್ಷಕ್ಕೂ ಹೆಚ್ಚು ಜನರನ್ನು ಹೊರತುಪಡಿಸಿ. ಅಂತಿಮ ಎನ್‌ಆರ್‌ಸಿಗೆ ಸೇರ್ಪಡೆಗೊಳ್ಳಲು ಮೂರು ಕೋಟಿಗೂ ಹೆಚ್ಚು ಜನರು ಅರ್ಹರಾಗಿದ್ದಾರೆ ಎಂದು ಎನ್‌ಆರ್‌ಸಿಯ ರಾಜ್ಯ ಸಂಯೋಜಕ ಪ್ರತೀಕ್ ಹಜೆಲಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.