ನವದೆಹಲಿ: ವಯಸ್ಕ ಮಹಿಳೆಯೊಬ್ಬಳು ತಾನು ಯಾರ ಜೊತೆ ಬದುಕಬೇಕು, ಎಲ್ಲಿ ಬದುಕಬೇಕು ಎನ್ನುವ ಆಯ್ಕೆಗೆ ಸಂಪೂರ್ಣ ಸ್ವತಂತ್ರಳು ಎಂದು ಸುಪ್ರೀಂ ಕೋರ್ಟ್ ಸೋಮವಾರದಂದು ಮಹತ್ವದ ತೀರ್ಪು ನೀಡಿದೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಹರ್ಯಾಣದ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ ಬಲವಂತವಾಗಿ ಅವಳನ್ನು ವ್ಯಕ್ತಿಯೊಬ್ಬನ ಜೊತೆ ಬದುಕಲು ಒತ್ತಡ ಹೇರಲಾಗಿದೆ ಎಂದು ಆ ಮಹಿಳೆಯ ಸಹೋದರ ಮತ್ತು ಸಹೋದರಿ ಆರೋಪಿಸಿದ್ದರು. 


ಇದೇ ಸಂದರ್ಭದಲ್ಲಿ ವಿಚಾರಣೆ ವೇಳೆ ದಯಾವಂತಿ ಎನ್ನುವ ಆ ಮಹಿಳೆ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ರನ್ನು ಒಳಗೊಂಡ ಪೀಠದ ಎದುರು ಹಾಜರಾಗಿ ತಾನು  ಜಗದೀಶ ಎನ್ನುವ ವ್ಯಕ್ತಿಯೊಂದಿಗೆ ತನ್ನ ಇಚ್ಚಾನುಸಾರ ವಾಸಿಸುತ್ತಿರುವುದಾಗಿ  ತಿಳಿಸಿದಳು. ಇದರಲ್ಲಿ ಯಾರ ಒತ್ತಡವೂ ಇಲ್ಲವೆಂದು ಪೀಠಕ್ಕೆ ಹೇಳಿಕೆ ನೀಡಿದಳು. 


ದಯಾವಂತಿಯ ವಿಚಾರಣೆಯ ನಂತರ ತೀರ್ಪು ನೀಡಿರುವ  ಸುಪ್ರಿಂ ಕೋರ್ಟ್ ಯಾವುದೇ ಮಹಿಳೆಯು ತಾನು ಎಲ್ಲಿ ಬದುಕಬೇಕು, ಯಾರ ಜೊತೆ ಬದುಕಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳುವಲ್ಲಿ ಸ್ವತಂತ್ರಳಾಗಿದ್ದಾಳೆ  ಎಂದು ತಿಳಿಸಿದೆ.