ಬೆಂಗಳೂರು: ಭಾರತದ ಅತಿದೊಡ್ಡ ದ್ವೈವಾರ್ಷಿಕ ಏರ್ ಶೋ, ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು 1996ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಪ್ರತಿಷ್ಠಿತ ಏರೋ ಇಂಡಿಯಾ 2019 ಅನ್ನು ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ನಿಲ್ದಾಣದಲ್ಲಿ ನಡೆಸುವ ಬದಲಿಗೆ ಲಕ್ನೋದಲ್ಲಿನ ಬಕ್ಷಿ ಕಾ ತಲಾಬ್ ಏರ್ ಫೋರ್ಸ್ ಸ್ಟೇಷನ್ಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ ಎಂದು ಕೇಂದ್ರ ಸರ್ಕಾರ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ 12ನೇ ಆವೃತ್ತಿಯ ಏರೋ ಇಂಡಿಯಾ 2019 ನ್ನು ಲಕ್ನೋದ ಬಕ್ಷಿ ಕಾ ತಾಲಾಬ್​ ಏರ್​ ಫೋರ್ಸ್​ ಸ್ಟೇಷನ್​ಗೆ ಸ್ಥಳಾಂತರಿಸುವ ಸಾಧ್ಯತೆ ಇದ್ದು, ಈ ಮೊದಲು ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಗೋವಾಗೆ ಸ್ಥಳಾಂತರಿಸಬಹುದು ಎಂದು ಸುದ್ದಿಯಾಗಿತ್ತು. ಆದರೆ ಈಗ ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಉತ್ತರ ಪ್ರದೇಶಕ್ಕೆ ಶಿಫ್ಟ್ ಆಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. 


ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಬದಲಾಯಿಸುವ ಏಕೈಕ ಪ್ರಮುಖ ಕಾರಣವೆಂದರೆ ಏರ್ ಟ್ರಾಫಿಕ್. ಹಾಗಾಗಿ ಏರೋ ಇಂಡಿಯಾ 2019 ಅನ್ನು ಬೇರೆಡೆಗೆ ಸ್ಥಳಾಂತರಿಸಲು ಚಿಂತನೆ ನಡೆದಿದೆ. ಏರೋ ಇಂಡಿಯಾ 2019 ಎಲ್ಲಿ ನಡೆಯಬೇಕು ಎಂಬುದರ ಬಗ್ಗೆ ರಕ್ಷಣಾ ಸಚಿವಾಲಯ ಅಂತಿಮವಾಗಿ ನಿರ್ಧರಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.