ದೆಹಲಿ ಏರ್ಪೋರ್ಟ್ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಅಫ್ಘಾನ್ ಪ್ರಜೆ ಬಂಧನ
ಆರೋಪಿ ತನ್ನ ಶೂನಲ್ಲಿ 2 ಕೆ.ಜಿ. ಚಿನ್ನವನ್ನು ಬಚ್ಚಿಟ್ಟು, ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಚಿನ್ನದ ಬೆಲೆ ಸುಮಾರು 73 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ.
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಅಫ್ಘಾನ್ ಪ್ರಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತನ್ನ ಶೂನಲ್ಲಿ 2 ಕೆ.ಜಿ. ಚಿನ್ನವನ್ನು ಬಚ್ಚಿಟ್ಟು, ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಚಿನ್ನದ ಬೆಲೆ ಸುಮಾರು 73 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಸೆಪ್ಟೆಂಬರ್ 10ರಂದು ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಕಾಬೂಲ್‌ನ ಅಫ್ಘಾನ್ ಪ್ರಜೆಯನ್ನು ತಡೆದು ಪರಿಶೀಲಿಸಲಾಗಿ, ಆತ ಧರಿಸಿದ್ದ ಕಪ್ಪು ಬಣ್ಣದ ಶೂನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ.
ತಲಾ ಒಂದು ಕೆ.ಜಿ. ತೂಗುವ ಎರಡು ಚಿನ್ನದ ಬಿಸ್ಕತ್ತುಗಳನ್ನು ತನ್ನ ಎರಡೂ ಶೂ ಒಳಗೆ ಒಂದೊಂದು ಇರಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಸದ್ಯ ಆತನನ್ನು ಬಂಧಿಸಲಾಗಿದ್ದು, ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.