ರಾಂಚಿ: ರಮೇಶ್ ಗೋಪೆ ಮತ್ತು ಮನೋನಿತ್ ಕೆರ್ಕೆತ್ತಾ 14 ವರ್ಷಗಳ ನಂತರ ಲಿವ್ ಇನ್ ಸಂಬಂಧ ನಂತರ ಮದುವೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಬುಡಕಟ್ಟು ಸಂಪ್ರದಾಯದ ಪ್ರಕಾರ ಈ ಇಬ್ಬರು ದಂಪತಿಗಳಿಗೆ ಮದುವೆಯಾಗಲಿಕ್ಕೆ ಅವಕಾಶವಿದ್ದಿರಲಿಲ್ಲ,ಆದರೆ ಈಗ ಸಿಐಎಲ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಹಿಂದುಸ್ತಾನ ಪೆಟ್ರೋಲಿಯಂ ಲಿಮಿಟೆಡ್ ಸಂಸ್ಥೆಗಳೆಲ್ಲವು  ಕೂಡ ನಿಮಿತಾ ಎನ್ನುವ ಸರ್ಕಾರೇತರ ಸಂಸ್ಥೆಗಳು ಈ ದಂಪತಿಗಳ ಮದುವೆಗೆ ಸಹಾಯ ಮಾಡಿವೆ.


ಸೋಮವಾರದಂದು ನಡೆದ ಸುಮಾರು 132 ಬುಡಕಟ್ಟು ದಂಪತಿಗಳ ಮದುವೆಯಲ್ಲಿ ಈ ಇಬ್ಬರು ಮದುವೆಯೂ ನಡೆಯಿತು. ಜಾರ್ಖಂಡ್ ನ ರಾಂಚಿ, ಖುಂತಿ, ಗುಮ್ಲಾ ಪ್ರದೇಶಗಳ ಈ ಎಲ್ಲ ಜೋಡಿಗಳ ಮದುವೆಯು ರಾಂಚಿಯ ಐಎಎಸ್ ಕ್ಲಬ್ ನಲ್ಲಿ ನಡೆಯಿತು.


ಸಾಂಪ್ರದಾಯಿಕ ಬುಡಕಟ್ಟು ಸಮಾಜದಲ್ಲಿ ಮಹಿಳೆ ಮತ್ತು ಪುರುಷನಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸಮಾನಾದ ಅವಕಾಶವಿದೆ.ಇದರ ಅಡಿಯಲ್ಲಿ ಮಹಿಳೆಯು ಮದುವೆಯಾಗದೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.ಆದರೆ ಇದರಿಂದ ಬಹುತೇಕ ಮಹಿಳೆಯರಿಗೆ ಕಾನೂನಾತ್ಮಕವಾಗಿ ಯಾವುದೇ ರೀತಿಯ ಆಸ್ತಿಯ ಹಕ್ಕಿರುವುದಿಲ್ಲ.