ರಾಯಪುರ: 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಒಬ್ಬ ನುಸುಳುಕೋರನನ್ನು  ಭಾರತದ ಒಳಗಡೆ ಬಿಟ್ಟು ಕೊಡುವುದಿಲ್ಲ  ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಶುಕ್ರವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಯಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ  "ಇತ್ತೀಚೆಗೆ ಅಸ್ಸಾಂನಲ್ಲಿ, ಎನ್ಆರ್ಸಿ (ನಾಗರಿಕರು ರಾಷ್ಟ್ರೀಯ ರಿಜಿಸ್ಟರ್) ಪಟ್ಟಿಯಲ್ಲಿ 40ಲಕ್ಷ ಜನರನ್ನು ತೆಗೆದುಹಾಕಲಾಗಿದೆ.ಆದಾಗ್ಯೂ,ಪ್ರತಿಪಕ್ಷದ ನಾಯಕರು ತಮ್ಮ ಮಾನವ ಹಕ್ಕುಗಳಿಗೆ ಏನಾಗಬಹುದು ಎಂದು ಸಂಸತ್ತಿನಲ್ಲಿ ಪ್ರತಿಭಟಿಸಿದರು. ಭಾರತಕ್ಕೆ ಬಂದು ಹಿಂಸೆಯನ್ನು ಸೃಷ್ಟಿಸುವ ಈ ನುಸುಳುಕೋರರ ಮಾನವ ಹಕ್ಕುಗಳನ್ನು ಅವರು ಕಾಣುತ್ತಾರೆ. ಆದರೆ ಅವರು ನಮ್ಮ ಜನರ ಮಕ್ಕಳ ಮಾನವ ಹಕ್ಕುಗಳನ್ನು ನೋಡುತ್ತಾರಾ? ಆದ್ದರಿಂದ ನಾನು ರಾಹುಲ್ ಗಾಂಧಿ ಮತ್ತು ಅವರ ಕಂಪನಿಗೆ ಕೆಳುವುದಿಷ್ಟೇ ಈ ನುಸುಳುಕೋರರ ಬಗ್ಗೆ ನೀವು ಚಿಂತಿಸುತ್ತಿರಾ ಅಥವಾ ಈ ದೇಶದ ಯುವಕರ ಬಗ್ಗೆ ನೀವು ಚಿಂತಿಸುತ್ತಿದ್ದೀರಾ? 2019 ರ ನಂತರ ನಾವು ಭಾರತದಲ್ಲಿ ಒಬ್ಬ ನುಸುಳುಕೋರರಿಗೋ ಸಹಅನುಮತಿ ನೀಡುವುದಿಲ್ಲ" ಎಂದು ಅವರು ಹೇಳಿದರು.


ಚತ್ತೀಸ್ ಘಡ್ ದಲ್ಲಿ ಈ ರಾಜ್ಯ ವಿಧಾನಸಭೆ ಚುನಾವಣೆ ಇರುವುದರಿಂದ ಮತ್ತೊಮ್ಮೆ ಅಧಿಕಾರದ ಹಿಡಿಯುವ ಕನಸನ್ನು ಬಿಜೆಪಿ ಕಾಣುತ್ತಿದೆ. ಇಲ್ಲಿನ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.