ಭೋಪಾಲ್: ಇಡೀ ದೇಶ 72ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಮಧ್ಯಪ್ರದೇಶದ ಈ ಹಳ್ಳಿಯ ಜನ ಸ್ವಾತಂತ್ರ್ಯ ದೊರೆತು 72 ವರ್ಷಗಳ ಬಳಿಕ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಿದ್ದಾರೆ. ಮಧ್ಯ ಪ್ರದೇಶದ ಈ ಹಳ್ಳಿಯ ಜನ ಸ್ವಾತಂತ್ರ್ಯ ದಿನಾಚರಣೆಯನ್ನು ಮೊದಲ ಬಾರಿಗೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.  ಕಾರಣ ಏನು ಗೊತ್ತಾ? ಸ್ವಾತಂತ್ರ್ಯ ಬಂದು 72 ವರ್ಷಗಳ ನಂತರ ಈ ಹಳ್ಳಿಗೆ ವಿದ್ಯುತ್ ಸಂಪರ್ಕ ಲಭಿಸಿದೆ.  ಇಲ್ಲಿ, ಮೊದಲ ಬಾರಿಗೆ, ಗ್ರಾಮಸ್ಥರು ತಮ್ಮ ಮನೆಯಲ್ಲಿ ಕುಳಿತು ಟಿವಿಯಲ್ಲಿ ಸ್ವಾತಂತ್ರ್ಯ ದಿನದ ರಾಷ್ಟ್ರೀಯ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಸ್ವಾತಂತ್ರ್ಯದ ಏಳು ದಶಕಗಳ ನಂತರ, ಮಾಲ್ವಾ ಜಿಲ್ಲೆಯ ಧಮನಿಯಾ ಗ್ರಾಮದಲ್ಲಿ ವಿದ್ಯುತ್ ಸಿಕ್ಕಿದೆ. ಇದರಿಂದಾಗಿ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇಲ್ಲಿನ ಜನರ ಬದುಕು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿದೆ.


ಈ ಗ್ರಾಮದ ಜನಸಂಖ್ಯೆಯು ಸಾವಿರಕ್ಕೂ ಹೆಚ್ಚು ಆದರೆ ವಿದ್ಯುತ್ ಮತ್ತು ಇತರ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಜನರು ಕ್ರಮೇಣ ಗ್ರಾಮವನ್ನು ತೊರೆಯಲಾರಂಭಿಸಿದ್ದರು. ಇಂದು ಈ ಗ್ರಾಮದಲ್ಲಿ ಇನ್ನೂರು ಜನರೂ ಸಹ ಇಲ್ಲ. ಇದೀಗ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಲಭಿಸಿರುವುದು ಗ್ರಾಮಸ್ಥರಲ್ಲಿ ಸಂತೋಷ ತಂದಿದೆ.