White Fungus: ಬ್ಲಾಕ್ ಫಂಗಸ್ ಬಳಿಕ ವೈಟ್ ಫಂಗಸ್, ಅದು ದೇಹದ ಮೇಲೆ ಹೇಗೆ ದಾಳಿ ಮಾಡುತ್ತೆ ಗೊತ್ತಾ
White Fungus Symptoms: ವೈಟ್ ಫಂಗಸ್ ಕಂಡು ಬಂದಿರುವ ಹಲವು ರೋಗಿಗಳಲ್ಲಿ ಕರೋನಾವೈರಸ್ ನಂತಹ ರೋಗಲಕ್ಷಣಗಳು ಕಂಡು ಬಂದಿದೆ. ಆದರೆ ಅವರಲ್ಲಿ ಕರೋನಾ ಇರಲಿಲ್ಲ. ಕರೋನಾಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳಲ್ಲೂ ಅವರಿಗೆ ನೆಗೆಟಿವ್ ವರದಿಯೇ ಬಂದಿದೆ. ಆದರೆ ಅವರು ಬಿಳಿ ಶಿಲೀಂಧ್ರದಿಂದ ಅಂದರೆ ವೈಟ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.
ಪಾಟ್ನಾ: ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಈ ದಿನಗಳಲ್ಲಿ ಬಿಹಾರದಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ಭರಾಟೆ ಕಾಣುತ್ತಿವೆ. ಏತನ್ಮಧ್ಯೆ, ಪಾಟ್ನಾದಲ್ಲಿ ನಾಲ್ಕು ವೈಟ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿವೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಬಿಳಿ ಶಿಲೀಂಧ್ರದ (White Fungus) ನಾಲ್ಕು ರೋಗಿಗಳು ಪತ್ತೆಯಾಗಿದ್ದಾರೆ. ಸೋಂಕಿತ ರೋಗಿಗಳಲ್ಲಿ ಪಾಟ್ನಾದ ಒಬ್ಬರು ಪ್ರಸಿದ್ಧ ತಜ್ಞರು ಇದ್ದಾರೆ ಎಂದು ತಿಳಿದುಬಂದಿದೆ.
ವೈಟ್ ಫಂಗಸ್ ಬ್ಲಾಕ್ ಫಂಗಸ್ಗಿಂತ ಅಪಾಯಕಾರಿ:
ಈ ರೋಗವನ್ನು ಕಪ್ಪು ಶಿಲೀಂಧ್ರಕ್ಕಿಂತ (Black Fungus) ಹೆಚ್ಚು ಅಪಾಯಕಾರಿ ಎಂದು ವಿವರಿಸಲಾಗುತ್ತಿದೆ. ಕರೋನಾದಂತೆಯೇ ವೈಟ್ ಫಂಗಸ್ ರೋಗಿಗಳಲ್ಲೂ ಶ್ವಾಸಕೋಶಕ್ಕೆ ಸೋಂಕು ತಗುಲುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಸೋಂಕು ದೇಹದ ಇತರ ಭಾಗಗಳಾದ ಉಗುರುಗಳು, ಚರ್ಮ, ಹೊಟ್ಟೆ, ಮೂತ್ರಪಿಂಡ, ಮೆದುಳು, ಖಾಸಗಿ ಭಾಗಗಳು ಮತ್ತು ಬಾಯಿಗೂ ಹರಡಬಹುದು ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ವೈಟ್ ಫಂಗಸ್ ಪ್ರಕರಣಗಳು ಎಲ್ಲೆಲ್ಲಿ ಪತ್ತೆಯಾಗಿವೆ?
ಇಲ್ಲಿಯವರೆಗೆ, ಪಾಟ್ನಾದಲ್ಲಿ ಬಿಳಿ ಶಿಲೀಂಧ್ರದ ನಾಲ್ಕು ರೋಗಿಗಳು ಪತ್ತೆಯಾಗಿದ್ದಾರೆ ಎಂದು ಪಿಎಂಸಿಎಚ್‌ನ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯ ವೈದ್ಯ ಎಸ್.ಎನ್. ಸಿನ್ಹಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- Corona ಬಳಿಕ ಮಹಾಮಾರಿ ಎಂದು ಘೋಷಿಸಲ್ಪಟ್ಟ Black Fungus, ಅಧಿಸೂಚನೆ ಜಾರಿಗೊಳಿಸಿದ ಸರ್ಕಾರ
ವೈಟ್ ಫಂಗಸ್ ಗೆ ಒಳಗಾಗಿರುವ ಬಗ್ಗೆ ರೋಗಿಗಳಿಗೆ ತಿಳಿದಿದ್ದು ಹೇಗೆ?
ನಾಲ್ಕು ರೋಗಿಗಳಿಗೆ ಕರೋನಾದಂತಹ ಲಕ್ಷಣಗಳು (Symptoms Like Corona Patients) ಕಂಡು ಬಂದಿವೆ. ಆದರೆ ಅವರಿಗೆ ಕರೋನಾ (Coronavirus) ಇರಲಿಲ್ಲ.ಕರೋನಾಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳಲ್ಲೂ ಅವರಿಗೆ ನೆಗೆಟಿವ್ ವರದಿಯೇ ಬಂದಿದೆ. ಆದರೆ ಅವರು ಬಿಳಿ ಶಿಲೀಂಧ್ರ ಅಂದರೆ ವೈಟ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.
ಆದಾಗ್ಯೂ, ಆಂಟಿ ಫಂಗಲ್ ಔಷಧಿ ನೀಡುವ ಮೂಲಕ ನಾಲ್ಕು ರೋಗಿಗಳನ್ನು ಗುಣಪಡಿಸಲಾಗಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ. ವೈದ್ಯರ ಪ್ರಕಾರ, ಬಿಳಿ ಶಿಲೀಂಧ್ರದಿಂದ ಕೂಡ ಶ್ವಾಸಕೋಶವು ಸೋಂಕಿಗೆ ಒಳಗಾಗಬಹುದು. ಎಚ್‌ಆರ್‌ಸಿಟಿ ನಡೆಸಿದಾಗ ಕರೋನಾಗೆ ಹೋಲುವ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ- 'ಬ್ಲ್ಯಾಕ್ ಫಂಗಸ್' ಬಗ್ಗೆ ಆತಂಕಕಾರಿ ಹೇಳಿಕೆ ನೀಡಿದ ಸಚಿವ ಸುಧಾಕರ್..!
ಎಚ್‌ಆರ್‌ಸಿಟಿಯಲ್ಲಿ ಕರೋನದ ಲಕ್ಷಣಗಳು ಕಾಣಿಸಿಕೊಂಡರೆ ಬಿಳಿ ಶಿಲೀಂಧ್ರವನ್ನು ಪತ್ತೆಹಚ್ಚಲು ಲೋಳೆಯ ಸಂಸ್ಕೃತಿಯನ್ನು ಪರೀಕ್ಷಿಸುವುದು ಅಗತ್ಯ ಎಂದು ವೈದ್ಯರು ಹೇಳುತ್ತಾರೆ. ಕಪ್ಪು ಶಿಲೀಂಧ್ರದಂತೆಯೇ ಬಿಳಿ ಶಿಲೀಂಧ್ರಕ್ಕೂ ರೋಗನಿರೋಧಕ ಶಕ್ತಿ ಕೊರತೆಯೂ ಒಂದು ಕಾರಣ ಎಂದು ಅವರು ಹೇಳಿದರು. ಮಧುಮೇಹ ರೋಗಿಗಳಲ್ಲಿ ಇದರ ಅಪಾಯ ಹೆಚ್ಚು ಅಥವಾ ದೀರ್ಘಕಾಲದವರೆಗೆ ಸ್ಟೀರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿ ಇದರ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.