ಬಹ್ರೇಚ್: ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ನಡುವೆ ಬಹ್ರೇಚ್‌ನ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಅನುಪಮಾ ಜೈಸ್ವಾಲ್ ಅವರು ಚೀನಾ ನಿರ್ಮಿತ ಎಲ್ಲಾ ಆ್ಯಪ್‌ಗಳನ್ನು ಜನರ ಮೊಬೈಲ್ ಫೋನ್‌ಗಳಿಂದ ಅಳಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದರ ಅಡಿಯಲ್ಲಿ  ಪ್ರತಿಯೊಂದು ಅಪ್ಲಿಕೇಶನ್‌ ಡಿಲೀಟ್ ಮಾಡುವುದರೊಂದಿಗೆ ಮಾಸ್ಕ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಚೀನಾ ನಿರ್ಮಿತ 59 ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ನಂತರ, ಬಹ್ರೇಚ್‌ನಲ್ಲಿರುವ ಸಾಮಾನ್ಯ ಜನರ ಮೊಬೈಲ್ ಫೋನ್‌ಗಳಿಂದ  ಚೀನಿ ಆ್ಯಪ್‌ಗಳನ್ನು (Chinese apps) ಅಳಿಸುವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಬಹ್ರೇಚ್ ನಗರದ ಬಿಜೆಪಿ ಶಾಸಕ ಮತ್ತು ಮಾಜಿ ಶಿಕ್ಷಣ ಸಚಿವ ಅನುಪಮಾ ಜೈಸ್ವಾಲ್ ಗುರುವಾರ ಹೇಳಿದ್ದಾರೆ. 


ಈ ಕಡೆಗೆ ಸಾಮಾನ್ಯ ಜನರನ್ನು ಪ್ರೋತ್ಸಾಹಿಸಲು, ಪ್ರತಿ ಚೀನೀ ಅಪ್ಲಿಕೇಶನ್ ಅನ್ನು ಮೊಬೈಲ್ ಫೋನ್‌ನಿಂದ ಡಿಲೀಟ್ ಮಾಡಿದ ನಂತರ ಫೇಸ್ ಮಾಸ್ಕ್ (Mask) ನೀಡಲಾಗುತ್ತಿದೆ ಎಂದು ಅವರು ಹೇಳಿದರು.


ಮಾಜಿ ಸಚಿವರು ಪಕ್ಷದ ಮಹಿಳಾ ಮೋರ್ಚಾದೊಂದಿಗೆ ಈ ಅಭಿಯಾನವನ್ನು ನಡೆಸಿದ್ದಾರೆ. ಸದರ್ ಶಾಸಕ ಅನುಪಮಾ ಅವರ ನೇತೃತ್ವದಲ್ಲಿ 4-5 ಮಹಿಳಾ ಕಾರ್ಯಕರ್ತರ ಗುಂಪು ಬುಧವಾರ ಮಧ್ಯಾಹ್ನದಿಂದ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಹೋಗಿ ತಮ್ಮ ಮೊಬೈಲ್‌ಗಳಿಂದ ಚೀನಾದ ಆ್ಯಪ್‌ಗಳನ್ನು ಡಿಲೀಟ್ ಮಾಡುವಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ ಎಂದು ಫ್ರಂಟ್ ನಗರ ಅಧ್ಯಕ್ಷ ಏಕ್ತಾ ಜೈಸ್ವಾಲ್ ತಿಳಿಸಿದ್ದಾರೆ. ಚೀನಾ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡುವವರಿಗೆ ಉಚಿತವಾಗಿ ಮಾಸ್ಕ್ ಗಳನ್ನು ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.


ನಮ್ಮ ತಂಡದಲ್ಲಿ ಸ್ಮಾರ್ಟ್ ಫೋನ್‌ಗಳ ತಜ್ಞರು ಮತ್ತು ಸ್ವಯಂ ಸೇವಕರು ನಮ್ಮ ಜೊತೆಗಿದ್ದಾರೆ ಎಂದು ಏಕ್ತಾ ಹೇಳಿದರು. ಅವರ ಸಹಾಯದಿಂದ, ನಾವು ಜನರ ಸಮಯವನ್ನು ವ್ಯರ್ಥ ಮಾಡದೆ ಅಪ್ಲಿಕೇಶನ್ ಅನ್ನು ತ್ವರಿತವಾಗಿ ಡಿಲೀಟ್ ಮಾಡುತ್ತಿದ್ದೇವೆ. ಬುಧವಾರ 100ಕ್ಕೂ ಹೆಚ್ಚು ಜನರ ಮೊಬೈಲ್ ಫೋನ್‌ಗಳಿಂದ ಚೀನಾ ನಿರ್ಮಿತ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದವರು ಮಾಹಿತಿ ನೀಡಿದರು.


ಜೂನ್ 29 ರಂದು ಭಾರತ ಟಿಕ್ ಟಾಕ್ (TikTok), ಯುಸಿ ಬ್ರೌಸರ್ ಸೇರಿದಂತೆ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿತು. ಈ ಎಲ್ಲಾ ಆ್ಯಪ್‌ಗಳು ದೇಶದ ಸಾರ್ವಭೌಮತ್ವ, ಏಕತೆ ಮತ್ತು ರಕ್ಷಣೆಗೆ ಧಕ್ಕೆ ತರುತ್ತಿದ್ದವು ಎಂದು ಹೇಳಲಾಗಿದೆ.