ಸ್ವಾತಂತ್ರ್ಯದ ನಂತರ 25ಕ್ಕೂ ಅಧಿಕ ನಾಯಕರಿಂದ ಮಂಡನೆಯಾಗಿದೆ ಬಜೆಟ್
ಸ್ವಾತಂತ್ರ್ಯದ ನಂತರ, 25 ಕ್ಕೂ ಹೆಚ್ಚು ನಾಯಕರು ದೇಶದಲ್ಲಿ ಹಣಕಾಸು ಮಂತ್ರಿಯ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.
ನವದೆಹಲಿ: ಸ್ವಾತಂತ್ರ್ಯದ ನಂತರ ಇದುವರೆಗೂ ದೇಶದಲ್ಲಿ 85ಕ್ಕೂ ಹೆಚ್ಚು ಬಾರಿ ಬಜೆಟ್ ಮಂಡಿಸಲಾಗಿದೆ. ಇದು ಪೂರ್ಣ ಮತ್ತು ಮಧ್ಯಂತರ ಬಜೆಟ್ ಗಳನ್ನು ಒಳಗೊಂಡಿದೆ. 25 ಕ್ಕೂ ಹೆಚ್ಚು ನಾಯಕರು ದೇಶದಲ್ಲಿ ಹಣಕಾಸು ಮಂತ್ರಿಯ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಪ್ರಸಕ್ತ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಹುದ್ದೆ ಅಲಂಕರಿಸಿದ 26ನೇ ನಾಯಕ.
ಇದುವರೆಗೂ ಹಣಕಾಸು ಸಚಿವರ ಸ್ಥಾನ ಅಲಂಕರಿಸಿದ ನಾಯಕರ ಕಾಲಾವಧಿಯನ್ನು ತಿಳಿಯೋಣ...
1. ಆರ್. ಕೆ. ಶಣ್ಮುಖಂ ಚೆಟ್ಟಿ - 15 ಆಗಸ್ಟ್ 1947 ರಿಂದ 1949
2. ಜಾನ್ ಮಥಾಯ್ - 1949 ರಿಂದ 1950
3. ಸಿ. ಡಿ. ದೇಶ್ಮುಖ್ - ಮೇ 29, 1950 ರಿಂದ 1957
4. ಟಿ.ಟಿ.ಕೃಷ್ಣಮಾಚಾರಿ - 1957 ರಿಂದ ಫೆಬ್ರವರಿ 13, 1958
5. ಜವಾಹರಲಾಲ್ ನೆಹರೂ - ಫೆಬ್ರವರಿ 13, 1958 ರಿಂದ ಮಾರ್ಚ್ 13, 1958
6. ಮೊರಾರ್ಜಿ ದೇಸಾಯಿ - ಮಾರ್ಚ್ 13, 1958 ರಿಂದ 1963ರ ಆಗಸ್ಟ್ 29
7. ಟಿ.ಟಿ.ಕೃಷ್ಣಮಾಚಾರಿ - ಆಗಸ್ಟ್ 29, 1963 ರಿಂದ 1965
8. ಸಚಿಂದ್ರಾ ಚೌಧರಿ - 1965-13 ಮಾರ್ಚ್ 1967
9. ಮೊರಾರ್ಜಿ ದೇಸಾಯಿ - ಮಾರ್ಚ್ 13, 1967 ರಿಂದ ಜುಲೈ 16, 1969
10. ಇಂದಿರಾ ಗಾಂಧಿ - 1970 ರಿಂದ 1971
11. ಯಶ್ವಂತ್ ರಾವ್ ಚೌಹಾನ್ - 1971 ರಿಂದ 1975
12. ಸಿ. ಸುಬ್ರಮಣ್ಯಂ - 1975 ರಿಂದ 1977
13. ಹರಿಭಾಯ್ ಎಮ್. ಪಟೇಲ್ - ಮಾರ್ಚ್ 24, 1977 ರಿಂದ ಜನವರಿ 24, 1979
14. ಚೌಧರಿ ಚರಣ್ ಸಿಂಗ್ - ಜನವರಿ 24, 1979 ರಿಂದ ಜುಲೈ 28, 1979
15. ಹೇಮವತಿ ನಂದನ್ ಬಹುಗುಣ - ಜುಲೈ 28, 1979 ರಿಂದ ಜನವರಿ 14, 1980
16. ಆರ್. ವೆಂಕಟರಾಮನ್ - ಜನವರಿ 14, 1980 ರಿಂದ ಜನವರಿ 15, 1982
17. ಪ್ರಣಬ್ ಮುಖರ್ಜಿ - ಜನವರಿ 15, 1982 ರಿಂದ ಡಿಸೆಂಬರ್ 31, 1984
18. ವಿ.ಪಿ. ಸಿಂಗ್ - ಡಿಸೆಂಬರ್ 31, 1984 ರಿಂದ ಜನವರಿ 24, 1987
19. ರಾಜೀವ್ ಗಾಂಧಿ - ಜನವರಿ 24, 1987 ರಿಂದ ಜುಲೈ 25, 1987
20. ನಾರಾಯಣ್ ದತ್ ತಿವಾರಿ - ಜುಲೈ 25, 1987 ರಿಂದ ಜೂನ್ 25, 1988
21. ಶಂಕರ್ ರಾವ್ ಚೌಹಾಣ್ - ಜೂನ್ 25, 1988ರಿಂದ ಡಿಸೆಂಬರ್ 2, 1989
22. ಮಧು ದಂದಾವತೆ - ಡಿಸೆಂಬರ್ 2, 1989 ರಿಂದ ನವೆಂಬರ್ 10, 1990
23. ಯಶವಂತ್ ಸಿನ್ಹಾ - ನವೆಂಬರ್ 10, 1990 ರಿಂದ ಜೂನ್ 21, 1991
24. ಮನಮೋಹನ್ ಸಿಂಗ್ - ಜೂನ್ 21, 1991 ರಿಂದ ಮೇ 16, 1996
25. ಜಸ್ವಂತ್ ಸಿಂಗ್ - ಮೇ 16, 1996 ರಿಂದ ಜೂನ್ 1, 1996
26. ಪಿ. ಚಿದಂಬರಂ - ಜೂನ್ 1, 1996 ರಿಂದ ಏಪ್ರಿಲ್ 21, 1997
27. ಐ.ಕೆ. ಗುಜ್ರಾಲ್ - ಏಪ್ರಿಲ್ 21, 1997 ರಿಂದ ಮೇ 1, 1997
28. ಪಿ. ಚಿದಂಬರಂ - ಮೇ 1, 1997 ರಿಂದ ಮಾರ್ಚ್ 19, 1998
29. ಯಶವಂತ್ ಸಿನ್ಹಾ - ಮಾರ್ಚ್ 19, 1998 ರಿಂದ ಜುಲೈ 1, 2002
30. ಜಸ್ವಂತ್ ಸಿಂಗ್ - ಜುಲೈ 1, 2002 ರಿಂದ ಮೇ 22, 2004
31. ಪಿ. ಚಿದಂಬರಂ - ಮೇ 22, 2004 ರಿಂದ ನವೆಂಬರ್ 30, 2008
32. ಮನಮೋಹನ್ ಸಿಂಗ್ - ನವೆಂಬರ್ 30, 2008 ರಿಂದ ಜನವರಿ 24, 2009
33. ಪ್ರಣಬ್ ಮುಖರ್ಜಿ - ಜನವರಿ 24, 2009 ರಿಂದ ಜೂನ್ 26, 2012
34. ಮನಮೋಹನ್ ಸಿಂಗ್ - ಜೂನ್ 26, 2012 ರಿಂದ ಜುಲೈ 31, 2012
35. ಪಿ. ಚಿದಂಬರಂ - ಜುಲೈ 31, 2012 ರಿಂದ ಮೇ 26, 2014
36. ಅರುಣ್ ಜೇಟ್ಲಿ - ಮೇ 26, 2014 ರಿಂದ ಇದುವರೆಗೂ.