ನವದೆಹಲಿ: ಎರಡನೇ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.



COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್ " ಈ ಗೆಲುವು ಮೋದಿಗೆ ಲಭಿಸಿರುವ ಗೆಲುವು. ನೆಹರು ಹಾಗೂ ರಾಜೀವ್ ಗಾಂಧಿ ನಂತರ ಮೋದಿ ವರ್ಚಸ್ವಿ ನಾಯಕರಾಗಿದ್ದಾರೆ" ಎಂದು ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದ ಮೂಲಕ ಗೆಲುವನ್ನು ಸಾಧಿಸಿದ್ದು.ಈ ಹಿನ್ನಲೆಯಲ್ಲಿ ಕಮಲ್ ಹಾಸನ್ ಹಾಗೂ ರಜನಿ ಕಾಂತ್ ಗೆ ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.


ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ರಾಹುಲ್ ಗಾಂಧಿ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ ರಜನಿಕಾಂತ್ " ರಾಹುಲ್ ಗಾಂಧಿ ರಾಜೀನಾಮೆ ನೀಡಬಾರದು, ತಾವು ಸಾಧಿಸಬಹುದು ಎನ್ನುವುದನ್ನು ಅವರು ಸಾಬೀತುಪಡಿಸಬೇಕು.ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷವು ಸಹ ಶಕ್ತಿಯುತವಾಗಿರಬೇಕು" ಎಂದು ಹೇಳಿದರು.ಕಳೆದ ವಾರ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಿದ ಹಿನ್ನಲೆಯಲ್ಲಿ ರಜನಿಕಾಂತ್ ಟ್ವೀಟ್ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.