ಈ ರಾಜ್ಯದಲ್ಲಿ ಶಾಲೆ ತೆರೆದ ನಾಲ್ಕೇ ದಿನದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರಿಗೆ Corona Positive
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೀವನ ನಮಗೆ ಮುಖ್ಯವಾಗಿದೆ. ಕೋವಿಡ್ -19 ಪ್ರೋಟೋಕಾಲ್ ಅನ್ನು ಎಲ್ಲಾ ವಿಭಾಗಗಳಲ್ಲಿ ತಪ್ಪದೇ ಅನುಸರಿಸುವುದನ್ನು ಖಾತರಿಪಡಿಸಲಾಗುವುದು ಎಂದು ಆಂಧ್ರಪ್ರದೇಶದ ಶಿಕ್ಷಣ ಇಲಾಖೆ ಆಯುಕ್ತ ವಿ ಚಿನ್ನ ವೀರಭದ್ರು ಹೇಳಿದರು.
ಅಮರಾವತಿ: ಆಂಧ್ರಪ್ರದೇಶದಲ್ಲಿ 9, 10 ಮತ್ತು 12 ನೇ ತರಗತಿಗಳನ್ನು ಪ್ರಾರಂಭಿಸಿದ ನಂತರ 575 ವಿದ್ಯಾರ್ಥಿಗಳು ಮತ್ತು 829 ಶಿಕ್ಷಕರಲ್ಲಿ ಕೊರೊನಾವೈರಸ್ ಪಾಸಿಟಿವ್ (Coronavirus Positive) ಎಂದು ಕಂಡುಬಂದಿದೆ. ಆಂಧ್ರಪ್ರದೇಶ (Andhra Pradesh) ಶಿಕ್ಷಣ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 9 ಮತ್ತು 10 ನೇ ತರಗತಿಯ 9.75 ಲಕ್ಷ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಅದರಲ್ಲಿ 3.93 ಲಕ್ಷ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. 1.11 ಲಕ್ಷ ಶಿಕ್ಷಕರಲ್ಲಿ 99,000 ಸಾವಿರಕ್ಕೂ ಹೆಚ್ಚು ಶಿಕ್ಷಕರು ಶಾಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕರೋನಾ: ಈ ರಾಜ್ಯ ಸರ್ಕಾರದಿಂದ ದೀಪಾವಳಿ ಮಾರ್ಗಸೂಚಿ ಬಿಡುಗಡೆ, ಪ್ರಮುಖ ವಿಷಯಗಳನ್ನು ತಿಳಿಯಿರಿ
ಒಂದು ಸಮಯದಲ್ಲಿ 15-16 ವಿದ್ಯಾರ್ಥಿಗಳಿಗೆ ಮಾತ್ರ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ:-
ಶಿಕ್ಷಣ ಇಲಾಖೆ ಆಯುಕ್ತ ವಿ. ಚಿನ್ನಾ ವೀರಭಾದ್ರು ಮಾತನಾಡಿ, ಕೋವಿಡ್ -19 (Covid 19) ಪ್ರೋಟೋಕಾಲ್ ಅನ್ನು ಎಲ್ಲಾ ವಿಭಾಗಗಳಲ್ಲಿ ತಪ್ಪದೇ ಅನುಸರಿಸುವುದನ್ನು ಖಾತರಿಪಡಿಸಲಾಗುವುದು. ನವೆಂಬರ್ 4 ರಂದು ಸುಮಾರು 4 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದು, ಅದರಲ್ಲಿ 262 ಜನರು ಸೋಂಕಿಗೆ ಒಳಗಾಗಿದ್ದಾರೆ. ಇದು ಒಟ್ಟು ಸಂಖ್ಯೆಯ ಶೇಕಡಾ 0.1 ರಷ್ಟಿಲ್ಲ. ಆದ್ದರಿಂದ ಶಾಲೆಗೆ ಬರುವುದರಿಂದ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳುವುದು ತಪ್ಪು. ಪ್ರತಿ ಶಾಲಾ ಕೋಣೆಯಲ್ಲಿ ಒಂದು ಸಮಯದಲ್ಲಿ 15 ಅಥವಾ 16 ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ದೇಶದ ಸಾಕ್ಷರತೆಯಲ್ಲಿ ಕೇರಳಕ್ಕೆ ಅಗ್ರಸ್ಥಾನ, ಅತ್ಯಂತ ತಳಮಟ್ಟದಲ್ಲಿರುವ ರಾಜ್ಯವಿದು
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೀವನ ನಮಗೆ ಮುಖ್ಯವಾಗಿದೆ. ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ವೈರಸ್ ಹರಡುವ ಬಗ್ಗೆ ಪೋಷಕರು ಭಯಭೀತರಾಗಿದ್ದಾರೆ. ಆದರೆ ಯಾರೂ ಭಯಪಡುವ ಅಥವಾ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.
ಆಂಧ್ರಪ್ರದೇಶ ಸರ್ಕಾರದ ಆದೇಶದ ಪ್ರಕಾರ 9, 10ನೇ ತರಗತಿಗಳಿಗೆ ಅರ್ಧ ದಿನವಷ್ಟೇ ತರಗತಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಅಂತೆಯೇ ದಿನ ಬಿಟ್ಟು ದಿನ ತರಗತಿಗಳಿಗೆ ಹಾಜರಾಗುವಂತೆ ಮಕ್ಕಳಿಗೆ ಮಕ್ಕಳಿಗೆ ಸೂಚಿಸಲಾಗಿದೆ. ಇದಲ್ಲದೆ ನವೆಂಬರ್ 23 ರಿಂದ 6, 7 ಮತ್ತು 8 ತರಗತಿಗಳನ್ನು ತೆರೆಯಲು ಯೋಜಿಸಲಾಗಿದ್ದು, 1, 2, 3, 4 ಮತ್ತು 5 ತರಗತಿಗಳನ್ನು ಡಿಸೆಂಬರ್ 14 ರಿಂದ ತೆರೆಯಲು ಯೋಜಿಸಲಾಗುತ್ತಿದೆ.