ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಯ ನಾಲ್ವರು ಹಿರಿಯ ಅಧಿಕಾರಿಗಳಿಗೆ ಸಿವಿಲ್ ಏವಿಯೇಷನ್ ವಾಚ್‌ಡಾಗ್ ಡಿಜಿಸಿಎ ಶುಕ್ರವಾರ ಶೋಕಾಸ್ ನೋಟಿಸ್‌ಗಳನ್ನು ನೀಡಿದೆ ಎಂದು ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ವಾಯುಯಾನ ನಿಯಂತ್ರಕದ ವಿಶೇಷ ಲೆಕ್ಕಪರಿಶೋಧನಾ ತಂಡವು ಸುರಕ್ಷತೆಯ ವೈಫಲ್ಯ ಕಂಡು ಬಂದ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಜುಲೈ 8 ಮತ್ತು ಜುಲೈ 9 ರಂದು ಗುರಗಾಂವ್‌ನ ಇಂಡಿಗೊ ಕಚೇರಿಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಥವಾ ಡಿಜಿಸಿಎ ಲೆಕ್ಕಪರಿಶೋಧನೆ ನಡೆಸಿದೆ ಎನ್ನಲಾಗಿದೆ.


'ಇಂಡಿಗೊದ ತರಬೇತಿ ಮುಖ್ಯಸ್ಥ ಕ್ಯಾಪ್ಟನ್ ಸಂಜೀವ್ ಭಲ್ಲಾ; ವಿಮಾನ ಸುರಕ್ಷತೆಯ ಮುಖ್ಯಸ್ಥ ಕ್ಯಾಪ್ಟನ್ ಹೇಮಂತ್ ಕುಮಾರ್; ಕಾರ್ಯಾಚರಣೆಯ ಹಿರಿಯ ಉಪಾಧ್ಯಕ್ಷ ಕ್ಯಾಪ್ಟನ್ ಆಶಿಮ್ ಮಿತ್ರ; ಕ್ಯಾಪ್ಟನ್ ರಾಕೇಶ್ ಶ್ರೀವಾಸ್ತವ, ಕ್ಯೂಎ (ಕ್ವಾಲಿಟಿ ಅಶ್ಯೂರೆನ್ಸ್) ಮತ್ತು ಓಪ್ಸ್ ಸೇಫ್ಟಿ - ಈ ನಾಲ್ಕು ಅಧಿಕಾರಿಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ 'ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.


ದೇಶಾದ್ಯಂತ ಅನೇಕ ಲ್ಯಾಂಡಿಂಗ್ ಘಟನೆಗಳ ಹಿನ್ನೆಲೆಯಲ್ಲಿ ಡಿಜಿಸಿಎ ಮಾನ್ಸೂನ್ ಪೀಡಿತ ಪ್ರದೇಶಗಳಲ್ಲಿರುವ ಎಲ್ಲಾ ವಿಮಾನಯಾನ ಮತ್ತು ವಿಮಾನ ನಿಲ್ದಾಣಗಳ ವಿಶೇಷ ಲೆಕ್ಕಪರಿಶೋಧನೆಯನ್ನು ನಡೆಸುತ್ತಿದೆ.