ನವದೆಹಲಿ:  ಹನ್ನೆರಡು ವರ್ಷದ ಬಾಲಕಿ ಹಾರರ್ ಧಾರಾವಾಹಿ ವೀಕ್ಷಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ. ಪೋಷಕರು ಹತ್ತಿರದ ಮಾರುಕಟ್ಟೆಗೆ ಹೋಗಿದ್ದಾಗ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಇಬ್ಬರು ಬಾಲಕಿಯರು ತಮ್ಮ ಮೊಬೈಲ್‌ನಲ್ಲಿ ಭಯಾನಕ ಕಾರ್ಯಕ್ರಮದ ವೀಡಿಯೊವನ್ನು ವೀಕ್ಷಿಸುತ್ತಿದ್ದರು, ಅದರಲ್ಲಿ 12 ವರ್ಷದ ಬಾಲಕಿ ಖಾಲಿ ಬಕೆಟ್ ಮೇಲೆ ನಿಂತು ಟವಲ್ ಮೂಲಕ ನೇಣು ಹಾಕಿಕೊಂಡಿದ್ದಾಳೆ ಎನ್ನಲಾಗಿದೆ. ತನ್ನ ಅಕ್ಕ ಹೆಣಗಾಡುತ್ತಿರುವುದನ್ನು ನೋಡುತ್ತಾ, ತಂಗಿ ಸಹಾಯಕ್ಕಾಗಿ ತನ್ನ ನೆರೆಹೊರೆಯವರ ಸಹಾಯ ಕೋರಿದಳು ಎನ್ನಲಾಗಿದೆ.  ಆಗ ನೆರೆಹೊರೆಯವರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗೆ ಹೊತ್ತಿಗೆ ಅವಳು ಕೊನೆಯುಸಿರೆಳೆದಳು ಎನ್ನಲಾಗಿದೆ. ತದನಂತರ  ಬಾಲಕಿಯ ಶವವನ್ನು ಪೊಲೀಸರು ಮರಣೋತ್ತರ ನಂತರ ಪೋಷಕರಿಗೆ ಹಸ್ತಾಂತರಿಸಿದರು.


ಈ ಘಟನೆಯು ಮಕ್ಕಳ ಮೇಲೆ ದೂರದರ್ಶನ ಕಾರ್ಯಕ್ರಮಗಳು ಮತ್ತು ವೀಡಿಯೊಗಳ ಪರಿಣಾಮಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಇಂತಹ ಮಕ್ಕಳಿಗೆ ಫ್ಯಾಂಟಸಿ ಹಾಗೂ ವಾಸ್ತವನ್ನು ಪ್ರತ್ಯೇಕಿಸಲು ಅನೇಕ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ ಎಂದು ಹಲವು ಅಧ್ಯಯನಗಳು ಸೂಚಿಸಿವೆ.