ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ  ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಗ್ಯಾಂಗ್‌ಗೆ ಸೇರ್ಪಡೆಯಾದ ಯುವಕರ ಸಂಖ್ಯೆಯಲ್ಲಿ ಗಮನಾರ್ಹವಾಗಿ ಇಳಿಕೆ ಕಂಡುಬಂದಿದೆ. ಅಂಕಿ ಅಂಶಗಳ ಪ್ರಕಾರ ಸಾಮಾನ್ಯವಾಗಿ, ಪ್ರತಿ ತಿಂಗಳು ಸರಾಸರಿ 8 ಸ್ಥಳೀಯ ಯುವಕರು ಉಗ್ರಗಾಮಿ ಗ್ಯಾಂಗ್‌ಗಳಿಗೆ ಸೇರುತ್ತಿದ್ದರು. ಆದರೆ ಆಗಸ್ಟ್ 5 ರಿಂದ ಇಲ್ಲಿಯವರೆಗೆ ಕೇವಲ 14 ಯುವಕರು ಮಾತ್ರ ಭಯೋತ್ಪಾದಕ ಗ್ಯಾಂಗ್‌ನಲ್ಲಿ ಭಾಗಿಯಾಗಿದ್ದಾರೆಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಗುಪ್ತಚರ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, 2016 ರಲ್ಲಿ ಬುರ್ಹಾನ್ ವಾನಿ ಹತ್ಯೆಯ ನಂತರ, ಪಾಕಿಸ್ತಾನದ ಭಯೋತ್ಪಾದಕರ ಅಪಪ್ರಚಾರಕ್ಕೆ ಬಲಿಯಾದ ಯುವಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. 


ಗಮನಾರ್ಹವಾಗಿ, ಈ ವರ್ಷದ ನವೆಂಬರ್ 27 ರವರೆಗೆ ಪಾಕಿಸ್ತಾನವು 2835 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ. ಇದರಲ್ಲಿ, ನವೆಂಬರ್‌ನಲ್ಲೇ 268 ಬಾರಿ ಗಡಿಯಾಚೆಗಿನ ಗುಂಡಿನ ದಾಳಿ ನಡೆಸಲಾಗಿದೆ.  ಈ ವರ್ಷ, 158 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ. ಈ ಅವಧಿಯಲ್ಲಿ 172 ಭಯೋತ್ಪಾದಕ ಘಟನೆಗಳು ನಡೆದಿವೆ. ಕಾಶ್ಮೀರದಲ್ಲಿ ಗಡಿಯಾಚೆಗಿನ ಶೆಲ್ ದಾಳಿ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ 38 ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.