VIDEO: ಪಾಸ್‌ಪೋರ್ಟ್‌ಗಾಗಿ ಉಗ್ರ ಅಫ್ಜಲ್ ಗುರು ಮಗನಿಂದ ಬೇಡಿಕೆ!
ಅಫ್ಜಲ್ ಗುರು ಅವರ ಮಗ ಗಲಿಬ್ ಅಫ್ಜಲ್ ಗುರು 12 ನೇ ತರಗತಿ ಪರೀಕ್ಷೆಯಲ್ಲಿ 88 ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ.
ನವದೆಹಲಿ: 2001 ರಲ್ಲಿ ಭಾರತೀಯ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆಸಿ 2013 ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಅಫ್ಜಲ್ ಗುರು ಪುತ್ರ ಗಲಿಬ್ ಅಫ್ಜಲ್ ಗುರು ಪಾಸ್‌ಪೋರ್ಟ್‌ಗಾಗಿ ಭಾರತ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾನೆ.
ವಿದೇಶದಲ್ಲಿ ಅಧ್ಯಯನ ಮಾಡಲು ತನಗೆ ವಿದ್ಯಾರ್ಥಿವೇತನ ದೊರೆಯುತ್ತಿದ್ದು, ತನ್ನ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಇದರ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ನನ್ನ ಬಳಿ ಆಧಾರ್ ಕಾರ್ಡ್ ಇದೆ. ನನಗೆ ಪಾಸ್‌ಪೋರ್ಟ್ ವ್ಯವಸ್ಥೆಯನ್ನೂ ಮಾಡಿಕೊಡಿ ಎಂದು ಗಲಿಬ್ ಅಫ್ಜಲ್ ಗುರು ಕೇಳಿಕೊಂಡಿದ್ದಾನೆ.
ಸುದ್ದಿ ಸಂಸ್ಥೆ ಎಎನ್ಐಗೆ ಮಾತನಾಡಿದ ಅಫ್ಜಲ್ ಗುರು ಪುತ್ರ ಗಲಿಬ್ ಅಫ್ಜಲ್ "ನಾನು ನನ್ನ ಪಾಸ್‌ಪೋರ್ಟ್ ಪಡೆದುಕೊಳ್ಳಲು ಭಯಸುತ್ತೇನೆ. ಏಕೆಂದರೆ ಟರ್ಕಿಯಲ್ಲಿ ನಾನು ವೈದ್ಯಕೀಯ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದೇನೆ. ನನಗೆ ಆಧಾರ್ ಕಾರ್ಡ್ ಇದೆ. ನಾನು ಪಾಸ್ಪೋರ್ಟ್ ಪಡೆದರೆ, ಅಂತರಾಷ್ಟ್ರೀಯ ವೈದ್ಯಕೀಯ ವಿದ್ಯಾರ್ಥಿವೇತನವನ್ನು ಪಡೆಯಬಹುದು" ಎಂದಿದ್ದಾರೆ.
12ನೇ ತರಗತಿಯಲ್ಲಿ 88.2% ಪಡೆದ ಗಲಿಬ್ ಅಫ್ಜಲ್ ಗುರು:
ಜನವರಿ 2018 ರ ಸುದ್ದಿ ಪ್ರಕಾರ, 2018ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಬೋರ್ಡ್ ಆಫ್ ಸ್ಕೂಲ್ ಎಜ್ಯುಕೇಷನ್ ಪ್ರಕಟಿಸಿದ 12ನೇ ತರಗತಿ ಫಲಿತಾಂಶದಲ್ಲಿ ಗಲಿಬ್ ಅಫ್ಜಲ್ ಗುರು, 500 ಅಂಕಗಳಿಗೆ 441 ಅಂಕಗಳನ್ನು ಗಳಿಸಿ 88.2% ಪಡೆದಿದ್ದಾರೆ. ಅವರು ಪರಿಸರ ವಿಜ್ಞಾನದಲ್ಲಿ 94, ರಸಾಯನಶಾಸ್ತ್ರದಲ್ಲಿ 89, ಭೌತಶಾಸ್ತ್ರದಲ್ಲಿ 87, ಜೀವಶಾಸ್ತ್ರದಲ್ಲಿ 85 ಮತ್ತು ಸಾಮಾನ್ಯ ಇಂಗ್ಲಿಷ್ನಲ್ಲಿ 86 ಅಂಕಗಳನ್ನು ಗಳಿಸಿದ್ದಾರೆ.
ವೈದ್ಯರಾಗುವ ಅಭಿಲಾಷೆ ವ್ಯಕ್ತಪಡಿಸಿದ್ದ ಗಲೀಬ್:
2016 ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಶೇ. 95 ಅಂಕ ಗಳಿಸಿದ್ದ, ಗಲಿಬ್ ಅವರು ವೈದ್ಯಕೀಯ ಶಿಕ್ಷಣ ಹೊಂದುವ ಅಭಿಲಾಷೆ ಹೊಂದಿರುವುದಾಗಿ ತಿಳಿಸಿದ್ದರು. "ನಾನು ವೈದ್ಯನಾಗುವುದು ನನ್ನ ಪೋಷಕರು ಮತ್ತು ಕುಟುಂಬದ ಕನಸು, ನಾನು ಅದನ್ನು ಪೂರೈಸಲು ಪ್ರಯತ್ನಿಸುತ್ತೇನೆ" ಎಂದು ಗಲಿಬ್ ಹೇಳಿದ್ದರು.