Akash Anand: ಬಾಹುಜನ ಸಮಾಜವಾದ ಪಕ್ಷ (ಬಿ‌ಎಸ್‌ಪಿ) ದ ಮುಖ್ಯಸ್ಥೆ ಮಾಯಾವತಿ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನಲೆಯಲ್ಲಿ ಕರೆಯಲಾಗಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾಯಾವತಿ ಈ ಘೋಷಣೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಮಾಧ್ಯಮ ಮಿತ್ರರಿಗೆ ಮಾಹಿತಿ ನೀಡಿರುವ  ಬಿಎಸ್‌ಪಿ ಶಹಜಹಾನ್‌ಪುರ ಘಟಕದ ಜಿಲ್ಲಾಧ್ಯಕ್ಷ ಉದಯವೀರ್ ಸಿಂಗ್, ಪಕ್ಷದ ಅಧ್ಯಕ್ಷರು (ಮಾಯಾವತಿ) ಸಭೆಯಲ್ಲಿ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು ಎಂದು ತಿಳಿಸಿದರು. 


ಇದನ್ನೂ ಓದಿ- “ಆತ ಮುಸ್ಲಿಂ.. ಧರ್ಮಕ್ಕಾಗಿ ಪ್ರೀತಿ ತ್ಯಾಗ ಮಾಡುತ್ತಿದ್ದೇವೆ”- 4 ವರ್ಷಗಳ ಪ್ರೇಮಕ್ಕೆ ಬ್ರೇಕಪ್ ಹೇಳಿದ ಬಿಗ್’ಬಾಸ್ ಜೋಡಿ


ಲೋಕಸಭಾ ಚುನಾವಣೆ ಸಿದ್ದತೆ ಕುರಿತಂತೆ ಇಲ್ಲಿನ ಬಿಎಸ್‌ಪಿ ಕಚೇರಿಯಲ್ಲಿ ನಡೆದ ದೇಶಾದ್ಯಂತದ ಪಕ್ಷದ ನಾಯಕರ ಸಭೆಯಲ್ಲಿ ಮಾಯಾವತಿ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ ಎಂದು ಬಿ‌ಎಸ್‌ಪಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಅಂಬೇಡ್ಕರ್ ಕೂಡ ದೃಢಪಡಿಸಿದ್ದಾರೆ.  


ಬಿ‌ಎಸ್‌ಪಿ ಉತ್ತರಾಧಿಕಾರಿಯಾಗಿ ಆಕಾಶ್ ಆನಂದ್ ನೇಮಕ ಕುರಿತಂತೆ ಮಾತನಾಡಿದ ಬಿ‌ಎಸ್‌ಪಿ ಮುಖಂಡ ಭೀಮರಾವ್ ಅಂಬೇಡ್ಕರ್, ಆಕಾಶ್‌ ಆನಂದ್‌ ರೂಪದಲ್ಲಿ ಯುವ ನಾಯಕ ನಮಗೆ ಸಿಕ್ಕಿದ್ದಾರೆ. ಪಕ್ಷದ ಸಂಘಟನೆ ದುರ್ಬಲವಾಗಿರುವ ರಾಜ್ಯದಲ್ಲಿ ಆನಂದ್ ಪಕ್ಷವನ್ನು ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು. 


ಇನ್ನೂ ಬಿ‌ಎಸ್‌ಪಿ ಅಧ್ಯಕ್ಷೆ ಮಾಯಾವತಿ ಉತ್ತರಾಧಿಕಾರಿಯಾಗಿ ಆಕಾಶ್ ಆನಂದ್ ಅವರನ್ನು ಘೋಷಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿ‌ಎಸ್‌ಪಿ ಘಟಕದ ಅಧ್ಯಕ್ಷ ವಿಶ್ವನಾಥ್ ಪಾಲ್, 'ಇಡೀ ಬಹುಜನ ಸಮುದಾಯವು ಸಂತೋಷವಾಗಿದೆ'. ಆದರೆ,  ಪಕ್ಷದ ಅಧಿಕೃತ ಹೇಳಿಕೆಯಲ್ಲಿ ಅಂತಹ ಯಾವುದೇ ಘೋಷಣೆಯನ್ನು ಉಲ್ಲೇಖಿಸಲಾಗಿಲ್ಲ ಎಂದಿದ್ದಾರೆ. 


ಇದನ್ನೂ ಓದಿ- ಲೇಸ್‌ ಪ್ಯಾಕೇಟ್‌ನಲ್ಲಿ ಕೇವಲ ಎರಡೇ ಚಿಪ್ಸ್:‌ ವಿಡಿಯೋ ವೈರಲ್!‌


ಯಾರೀ ಆಕಾಶ್ ಆನಂದ್? 
ಲಂಡನ್‌ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಎಂಬಿಎ ಪದವಿ ಪಡೆದಿರುವ 27 ವರ್ಷದ ಆಕಾಶ್  ಆನಂದ್, ಮಾಯಾವತಿಯವರ ಸೋದರಳಿಯ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು), ಆಕಾಶ್ ಆನಂದ್ ತಮ್ಮನ್ನು  "ಬಾಬಾ ಸಾಹೇಬ್ ಅವರ ದೃಷ್ಟಿಯ ಯುವ ಬೆಂಬಲಿಗ" ಎಂದು ಕರೆದುಕೊಳ್ಳುತ್ತಾರೆ.


2017ರಲ್ಲಿ ರಾಜಕೀಯ ಪ್ರವೇಶಿಸಿದ ಆಕಾಶ್ ಆನಂದ್: 
27ವರ್ಷ ವಯಸ್ಸಿನ ಆಕಾಶ್ ಆನಂದ್ 2017ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು, ಅಂದಿನಿಂದ ಎಸ್‌ಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. 


2019 ರ ಲೋಕಸಭಾ ಚುನಾವಣೆಯಲ್ಲಿ, ಆಕಾಶ್ ಆನಂದ್ ಬಿ‌ಎಸ್‌ಪಿ ಮುಖ್ಯಸ್ಥರ ಚುನಾವಣಾ ಪ್ರಚಾರ ತಂತ್ರವನ್ನು ನಿರ್ವಹಿಸಿದರು. ಅವರು 2019 ರಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.


2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಚಾರದ ಸಮಯದಲ್ಲಿ ಪಕ್ಷದ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸಿದರು.


ಈ ವರ್ಷದ ಆರಂಭದಲ್ಲಿ, ಆಕಾಶ್ ಆನಂದ್ ಎಲ್ 14 ದಿನಗಳ 'ಸರ್ವಜನ್ ಹಿತಯ್, ಸರ್ವಜನ್ ಸುಖಯ್' ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಿದರು. ಇದನ್ನು ರಾಜಸ್ಥಾನದ ವಿಧಾನಸಭಾ ಚುನಾವಣೆ ಮತ್ತು 2024 ರಲ್ಲಿ ನಡೆಯುವ ನಿರ್ಣಾಯಕ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿ‌ಎಸ್‌ಪಿಯ ಕಾರ್ಯತಂತ್ರದ ಮರುಸ್ಥಾಪನೆ ಎಂತಲೇ ಬಣ್ಣಿಸಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.