Sonia Gandhi : ಅಗ್ನಿಪಥ್ ವಿರುದ್ಧ ಪ್ರತಿಭಟನೆ : `ಕಾಂಗ್ರೆಸ್ ನಿಮ್ಮೊಂದಿಗಿದೆ` ಎಂದು ಸೋನಿಯಾ ಪತ್ರ!
ಪ್ರತಿಭಟನಾಕಾರರಿಗೆ ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ ಸೋನಿಯಾ ಗಾಂಧಿ, ಈ ಕುರಿತು ಹೊಸ ಸಶಸ್ತ್ರ ಪಡೆಗಳ ನೇಮಕಾತಿ ನೀತಿಯನ್ನು ಸಂಪೂರ್ಣವಾಗಿ ದಿಕ್ಕಿಲ್ಲದ್ದು, ನರೇಂದ್ರ ಮೋದಿ ಸರ್ಕಾರವು ಸೇನಾ ಆಕಾಂಕ್ಷಿಗಳ ಧ್ವನಿಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿ : ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಉಸಿರಾಟದ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ ಅವರು ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದ ಬೆಂಬಲದ ಭರವಸೆ ನೀಡಿದ್ದಾರೆ.
ಪ್ರತಿಭಟನಾಕಾರರಿಗೆ ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ ಸೋನಿಯಾ ಗಾಂಧಿ, ಈ ಕುರಿತು ಹೊಸ ಸಶಸ್ತ್ರ ಪಡೆಗಳ ನೇಮಕಾತಿ ನೀತಿಯನ್ನು ಸಂಪೂರ್ಣವಾಗಿ ದಿಕ್ಕಿಲ್ಲದ್ದು, ನರೇಂದ್ರ ಮೋದಿ ಸರ್ಕಾರವು ಸೇನಾ ಆಕಾಂಕ್ಷಿಗಳ ಧ್ವನಿಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : Agnipath Scheme : 'ಅಗ್ನಿವೀರರಿಗೆ ಸರ್ಕಾರಿ ಈ ಉದ್ಯೋಗಗಳಲ್ಲಿ ಶೇ.10 ರಷ್ಟು ಮೀಸಲಾತಿ'
ಅಲ್ಲದೆ, ಯೋಜನೆಯನ್ನು ಹಿಂಪಡೆಯಲು ನಮ್ಮ ಪಕ್ಷವು ಪ್ರತಿಭಟನಾಕಾರರಿಗೆ ಸಹಾಯ ಮಾಡುತ್ತದೆ. ಪ್ರತಿಭಟನಾನಿರತ ಯುವಕರು ಶಾಂತಿಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದಾರೆ.
"ಸರ್ಕಾರವು ಹೊಸ ಸಶಸ್ತ್ರ ಪಡೆಗಳ ನೇಮಕಾತಿ ನೀತಿಯನ್ನು ಘೋಷಿಸಿರುವುದು ದುರದೃಷ್ಟಕರವಾಗಿದೆ, ಅದು ಸಂಪೂರ್ಣವಾಗಿ ದಿಕ್ಕಿಲ್ಲದೆ ಮತ್ತು ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ಜಾರಿ ಮಾಡಿದೆ" ಎಂದು ಹೇಳಿದ್ದಾರೆ.
ಹಲವಾರು ಮಾಜಿ ಸೈನಿಕರು ಮತ್ತು ರಕ್ಷಣಾ ತಜ್ಞರು ಹೆಚ್ಚಿನ ಸಶಸ್ತ್ರ ಪಡೆಗಳ ಸೇವಾ ಅವಧಿಯನ್ನು ಮೊಟಕುಗೊಳಿಸುವದು ಈ ಯೋಜನೆಯ ಗುರಿನಾ? ಎಂದು ಪ್ರಶ್ನಿಸಿದ್ದಾರೆ.
ಮೂರು ವರ್ಷಗಳ ನೇಮಕಾತಿ ನಿರ್ಬಂಧದಿಂದಾಗಿ ಸಶಸ್ತ್ರ ಪಡೆಗಳಲ್ಲಿ ಕೆಲಸದಿಂದ ವಂಚಿತರಾದವರ ನೋವು ನನಗೆ ಅರ್ಥವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Presidential Election 2022 : ರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿದ ಪ್ರತಿಪಕ್ಷದ ಹಿರಿಯ ನಾಯಕ!
"ಕಾಂಗ್ರೆಸ್ ಸಂಪೂರ್ಣ ನಿಮ್ಮೊಂದಿಗೆದೆ ಮತ್ತು ನಿಮ್ಮ ಹಿತಾಸಕ್ತಿಗಳಿಗಾಗಿ, ಈ ಯೋಜನೆಯನ್ನು ಹಿಂಪಡೆಯಲು ಹೋರಾಟ ಮಾಡುವ ಭರವಸೆಯನ್ನು ನಾನು ನೀಡುತ್ತಿದ್ದೇನೆ. ನಿಜವಾದ ದೇಶಭಕ್ತರಂತೆ, ನಾವು ಸತ್ಯ, ಅಹಿಂಸೆ, ಸ್ಥಿತಿಸ್ಥಾಪಕತ್ವ ಮತ್ತು ಶಾಂತಿಯ ಮಾರ್ಗವನ್ನು ಅನುಸರಿಸಿ ನಿಮ್ಮ ಧ್ವನಿನಿಗೆ ಧ್ವನಿಯಾಗುತ್ತವೆ" ಎಂದು ಪಾತ್ರದಲ್ಲಿ ತಿಳಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.