ನವದೆಹಲಿ: ಭಾನುವಾರದಂದು ಛತ್ತೀಸ್ ಗಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೂ ಮುನ್ನ ಭದ್ರತಾ ಪಡೆಗಳು ದಾಂತೇವಾಡಾ ಜಿಲ್ಲೆಯಲ್ಲಿ ನಕ್ಸಲರ ಉಪಸ್ಥಿತಿ ಇರುವುದನ್ನು ಡ್ರೋನ್ ಕ್ಯಾಮರಾ ಮೂಲಕ ಪತ್ತೆ ಹಚ್ಚಿದ್ದಾರೆ.


COMMERCIAL BREAK
SCROLL TO CONTINUE READING

ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ನಕ್ಸಲರು ಇರುವ ಹಲವು ಚಿತ್ರಗಳನ್ನು  ಸೆರೆಹಿಡಿಯಲಾಗಿದೆ.ಚುನಾವಣೆಗೂ ಈ ಭಾಗದ ಜನರಿಗೆ ಮತದಾನವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ.ಅಲ್ಲದೆ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಪೋಸ್ಟರ್ ಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


ಚುನಾವಣೆಗೂ ಮುನ್ನ ಈಗಾಗಲೇ ಕಂಕರ್ ಜಿಲ್ಲೆಯಲ್ಲಿ ನಕ್ಸಲರು ಬಿಎಸ್ಎಫ್ ಸೈನಿಕನ್ನು ಆರು ಐಎಡಿ ಸರಣಿ  ಸ್ಫೋಟಗಳ ಮೂಲಕ ಹತ್ಯೆ ಮಾಡಿದ್ದಾರೆ.ಇದಕ್ಕೆ ಪ್ರತಿಯಾಗಿ  ಬಿಜಾಪುರ ಜಿಲ್ಲೆಯ ಭದ್ರತಾ ಪಡೆಗಳು ಎನ್ಕೌಂಟರ್ ಮೂಲಕ ಕೊಲ್ಲಲ್ಪಟ್ಟಿದ್ದಾರೆ. 


ಮೊದಲ ಹಂತದ ಚತ್ತೀಸ್ ಘಡ್ ಚುನಾವಣೆಯಲ್ಲಿ ಒಟ್ಟು ಎಂಟು ಜಿಲ್ಲೆಗಳಲ್ಲಿ 18ಕ್ಕೂ ಅಧಿಕ  ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.ಇದಕ್ಕಾಗಿ ಈಗ ಛತ್ತೀಸ್ಗಢದಲ್ಲಿ ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


ಸುಮಾರು 650 ಮತಗಟ್ಟೆಗಳಿಗೆ ಸಿಬ್ಬಂಧಿಯನ್ನು ದೂರದ ಪ್ರದೇಶಗಳಿಗೆ ಹೆಲಿಕಾಪ್ಟರ್ಗಳ ಮೂಲಕ ಸಾಗಿಸಲಾಗಿದೆ ಇದಕ್ಕಾಗಿ ಭಾರತೀಯ ಏರ್ ಫೋರ್ಸ್ (ಐಎಎಫ್) ಮತ್ತು ಬಿಎಸ್ಎಫ್ ಪಡೆಗಳನ್ನು ಬಳಸಿಕೊಳ್ಳಲಾಗಿದೆ. ಇದೇ ವೇಳೆ ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಗಳ ಮೇಲೆ ಪೊಲೀಸರಿಗೆ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ.



\