Fake ₹500 notes: ₹500 ಮುಖಬೆಲೆಯ ನಕಲಿ ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್ ಫೋಟೊ!
Fake ₹500 notes: ಮೆಹುಲ್ ಠಕ್ಕರ್ ಅವರ ಬಳಿ 2KGಯಷ್ಟು ಚಿನ್ನ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ವಂಚಕರು ₹1.3 ಕೋಟಿ ನಗದು ಇದೆ ಎಂದು ಹೇಳಿ ಹಣದ ಬ್ಯಾಗ್ ಕೊಡಲು ಬಂದಿದ್ದರು. ನಕಲಿ ನೋಟುಗಳ ಜೊತೆಗೆ ತೋರಿಕೆಗೆ ಮೇಲೆ ಕೆಲವು ಅಸಲಿ ನೋಟುಗಳನ್ನು ಇಟ್ಟಿದ್ದರು.
Fake ₹500 notes: ಗುಜರಾತ್‌ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ನೀಡಿ ವಂಚಿಸಿರುವ ಘಟನೆ ನಡೆದಿದೆ. ಅಹಮದಾಬಾದ್‌ನ ಮಾಣಿಕ್ ಚೌಕ್‌ನ ಮೆಹುಲ್ ಠಕ್ಕರ್ ಅವರೇ ವಂಚನೆಗೊಳಗಾದ ವ್ಯಕ್ತಿ. ಈ ಬಗ್ಗೆ ಅವರು ನವರಂಗಪುರ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಪ್ರಕರಣದ ವಿಶೇಷವೆಂದರೆ ಠಕ್ಕರ್ ಅವರಿಗೆ ದೋಖಾ ಮಾಡಿದ ವಂಚಕರು ನೀಡಿದ್ದ ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳ ಮೇಲೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಚಿತ್ರದ ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ಅವರ ಚಿತ್ರಗಳಿವೆ.
ಇದನ್ನೂ ಓದಿ: 7ನೇ ವೇತನ ಆಯೋಗ: ದೀಪಾವಳಿಗೆ ಮುಂಚಿತವಾಗಿ ಸರ್ಕಾರಿ ಈ ರಾಜ್ಯದ ನೌಕರರಿಗೆ ಶೇ 4% ರಷ್ಟು ತುಟ್ಟಿ ಭತ್ಯೆ ಹೆಚ್ಚಳ
Rain Alert: ಮುಂದಿನ 24 ಗಂಟೆಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ; ರೆಡ್ ಅಲರ್ಟ್ ಘೋಷಣೆ!
ವಂಚಕರು ಕೊಟ್ಟು ಹೋದ ನೋಟುಗಳನ್ನು ಯಂತ್ರದ ಸಹಾಯದಿಂದ ಎಣಿಸಲು ಹೋದಾಗ ಠಕ್ಕರ್ ಅವರಿಗೆ ಅಸಲಿ ವಿಚಾರ ಗೊತ್ತಾಗಿದೆ. ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ ಅವರ ಚಿತ್ರವನ್ನು ನೋಡಿದ ಠಕ್ಕರ್ ಅವರಿಗೆ ಆಘಾತವಾಗಿದೆ. ಇನ್ನು ಈ ವಂಚನೆ ಬಗ್ಗೆ ಮಾತನಾಡಿರುವ ನವರಂಗಪುರ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎ.ಎ.ದೇಸಾಯಿ, ʼ ಈ ಬಗ್ಗೆ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.