ಚೆನ್ನೈ: ತಮಿಳುನಾಡಿನಲ್ಲಿ ಮೇ 19 ರಂದು ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ  ನಡೆಯಲಿರುವ ಉಪಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಮಂಗಳವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.


COMMERCIAL BREAK
SCROLL TO CONTINUE READING

ಪಕ್ಷದ ಸಂಘಟಕ ಓ ಪನ್ನೀರ್ ಸೆಲ್ವಂ ಮತ್ತು ಜಂಟಿ ಸಂಘಟಕರಾದ ಕೆ. ಪಳನಿಸ್ವಾಮಿ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಸುಳೂರ್, ಅರವಕುರಿಚಿ, ತಿರುಪಾರಂಕುಂದ್ರಾಮ್ ಮತ್ತು ಒಟ್ಟಪಿದಾರಂ (ಎಸ್ಸಿ) ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಪಾರ್ಲಿಮೆಂಟ್ ಬೋರ್ಡ್ ಅಂತಿಮಗೊಳಿಸಿದೆ ಎಂದಿದ್ದಾರೆ. ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು, ಪನ್ನೀರ್ ಸೆಲ್ವಂ ಅವರು ಉಪಮುಖ್ಯಮಂತ್ರಿ ಆಗಿದ್ದಾರೆ.


ಸುಳೂರ್ ಕ್ಷೇತ್ರದಿಂದ ವಿ.ಪಿ.ಕಂಡಸ್ವಾಮಿ, ಅರವಕುರಿಚಿ ಕ್ಷೇತ್ರದಿಂದ ವಿ.ವಿ. ಸೆಂಥಿಲ್ನಾಥನ್, ತಿರುಪಾರಂಕುಂದ್ರಾಮ್ ಕ್ಷೇತ್ರದಿಂದ ಎಸ್.ಮುನಿಯಾಂಡಿ ಮತ್ತು ಒಟ್ಟಪಿದಾರಂ ಕ್ಷೇತ್ರದಿಂದ ಪಿ.ಮೋಹನ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. 


ತಮಿಳುನಾಡಿನ 18 ವಿಧಾನಸಭೆ ಕ್ಷೇತ್ರಗಳು ಮತ್ತು 38 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಮತದಾನ ನಡೆದಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ. ತಮಿಳುನಾಡಿನ ವಿಧಾನಸಭೆಯ ಒಟ್ಟು ಸಂಖ್ಯಾ ಬಲ 234 ಇದ್ದು, 22 ಸ್ಥಾನಗಳು ಖಾಲಿ ಇವೆ. ಸದ್ಯ 18 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಉಳಿದ 4 ಸ್ಥಾನಗಳಿಗೆ ಮೇ 19ರಂದು ಚುನಾವಣೆ ನಡೆಯಲಿದೆ.