ಚೆನ್ನೈ:  ತಮಿಳುನಾಡಿನ ವಿಲುಪುರಂ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್. ರಾಜೇಂದ್ರನ್(63) ಮೃತಪಟ್ಟಿದ್ದಾರೆ.



COMMERCIAL BREAK
SCROLL TO CONTINUE READING

ವಿಲ್ಲಾಪುರಂ ಕ್ಷೇತ್ರದ ಸಂಸದರಾಗಿದ್ದ ರಾಜೇಂದ್ರನ್ ತಮ್ಮ ಕ್ಷೇತ್ರದಿಂದ ತ್ರಿವೇಂಡ್ರಮ್ ಗೆ ಸಂಚರಿಸುತ್ತಿದ್ದ ವೇಳೆ ಕಾರು ಚಾಲಕ ಡಿವೈಡರ್ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.


ತಮಿಳು ಸಾಹಿತ್ಯದಲ್ಲಿ ಪದವಿ ಪಡೆದಿರುವ ರಾಜೇಂದ್ರನ್ ರಸಗೊಬ್ಬರ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ವಿಲುಪುರಂ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು.