ನವದೆಹಲಿ: ಕಾಂಗ್ರೆಸ್ಸಿನ ಐಟಿ ಸೆಲ್​ ಸದಸ್ಯೆಯೊಬ್ಬರಿಗೆ ಸೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಸದಸ್ಯ ಚಿರಾಗ್ ಪಟ್ನಾಯಕ್ ರಿಂದ ಲೈಂಗಿಕ ದೌರ್ಜನ್ಯದ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ FIR ದಾಖಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮೊದಲು ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಚಿರಾಗ್ ಅಂತಹ ವ್ಯಕ್ತಿಯಲ್ಲ. ಈ ವಿಷಯದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಟ್ವೀಟ್ ಜೊತೆಗೊಂದು ಸುದೀರ್ಘ ಪತ್ರದ ಮೂಲಕ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.



COMMERCIAL BREAK
SCROLL TO CONTINUE READING

ಹಾಲಿ ಸಿಬ್ಬಂದಿಯೊಬ್ಬರಿಂದ ಮಾಜಿ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವರದಿಯನ್ನು ಮಾಜಿ ಸಂಸದೆ ರಮ್ಯಾ ಅವರು ತಳ್ಳಿ ಹಾಕಿರುವ ಎಐಸಿಸಿ ಐಟಿ ಮುಖ್ಯಸ್ಥೆ ರಮ್ಯಾ, ತಮ್ಮ ತಂಡದ ಬಗೆಗಿನ ಆರೋಪದ ಬಗ್ಗೆ ಗೊತ್ತಾಗಿದೆ. ಆದರೆ ಸಮಿತಿಗೆ ಮೌಖಿಕವಾಗಿ, ಅಧಿಕೃತವಾಗಿ, ಅನಧಿಕೃತವಾಗಿ ಯಾವುದೇ ದೂರು ಬಂದಿಲ್ಲ. ನಾವು ದೂರು ನೀಡಿರುವವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ವಿಷಯ ಏನು ಎಂಬುದನ್ನು ವಿವರವಾಗಿ ತಿಳಿದುಕೊಳ್ಳುತ್ತೇವೆ. ನಮ್ಮ ಬಳಿ ಕೆಲಸ ಮಾಡುವವರನ್ನು ಬೆಂಬಲಿಸುತ್ತೇವೆ. ಇದರ ಜೊತೆ ಲೈಂಗಿಕ ಕಿರುಕುಳದ ಕೇಸ್ ಪರಿಶೀಲನೆ ಮಾಡುತ್ತೇವೆ, ದೂರು ಕೊಟ್ಟ ಯುವತಿ ಅನಾರೋಗ್ಯದ ಕಾರಣ ನೀಡಿದ್ದರು, ಆದರೆ ಈ ವಿಷಯ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಜತೆಗೆ ಹಾಲಿ ಉದ್ಯೋಗಿ ಪರ 39 ಜನ ಇತರೆ ಸದಸ್ಯರು ಸಹಿ ಹಾಕಿ, ಸನ್ನಡತೆಯ ಪ್ರಮಾಣ ಪತ್ರ ನೀಡಿರುವ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.



ಏನಿದು ಪ್ರಕರಣ?
ಕಾಂಗ್ರೆಸ್ ಐಟಿ ಸೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿರಾಗ್ ಪಟ್ನಾಯಕ್ ಎಂಬ ವ್ಯಕ್ತಿ ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಏಪ್ರಿಲ್ ನಿಂದ ನನಗೆ ಲೈಂಗಿಕ ಕಿರುಕುಳ ಪ್ರಾರಂಭವಾಯಿತು. ಟ್ವೀಟ್ ಚೆಕ್ ಮಾಡುವ ನೆಪದಲ್ಲಿ ಚಿರಾಗ್ ನನ್ನ ಮೈ ಕೈ ಮುಟ್ಟಲು ಪ್ರಯತ್ನಿಸುತ್ತಿದ್ದ. ಮೇ. ಜೂನ್ ನನ್ನೊಂದಿಗೆ ಅಸಹ್ಯವಾಗಿ ನಡೆದುಕೊಳ್ಳುವ ಮೂಲಕ ಅವಧಿಯಲ್ಲಿ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ತಮಗಾಗುತ್ತಿರುವ ನೋವಿನ ಬಗ್ಗೆ ಮುಖ್ಯಸ್ಥೆ ರಮ್ಯಾ ಅವರಿಗೂ ದೂರು ನೀಡಿದ್ದೆ ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.